ಮೈಸೂರು: ಉದ್ಬೂರು ಗ್ರಾಮದ ಮನೆಯೊಂದರಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಉದ್ಬೂರು ಗ್ರಾಮದ ನಿವಾಸಿ ಕೃಷ್ಣ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಕೃಷ್ಣ ಅವರ ತಾಯಿ ಗೌರಮ್ಮ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣ ಅವರು ಕುಟುಂಬ ಸಹಿತ ಮೇ 10 ರಂದು ಗೌರಮ್ಮ ಅವರ ಮನೆಗೆ ತೆರಳಿದ್ದರು. ಆ ರಾತ್ರಿ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ 10 ಸಾವಿರ ರೂ. ನಗದು, 12 ಗ್ರಾಂ ಚಿನ್ನದ ಚೈನ್, ಒಟ್ಟು 16 ಗ್ರಾಂನ 4 ಉಂಗುರಗಳು, 5 ಗ್ರಾಂ ಕಿವಿ ಓಲೆ, 2 ಬೆಳ್ಳಿ ಕಾಲುಚೈನ್ ಕಳವು ಮಾಡಿದ್ದಾರೆ. ಈ ಕುರಿತು ಬುಧವಾರ ಕೃಷ್ಣ ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.