22 ಮನೆಗಳನ್ನು ಪಡೆದುಕೊಂಡ ಫಲಾನುಭವಿಗಳೊಂದಿಗೆ ಕೆ.ಹರೀಶ್‌ಗೌಡ, ಮಹಮ್ಮದ್ ಜಫ್ರುಲ್ಲಾ, ಜಿ.ಎಸ್. ರಾಮಚಂದ್ರ, ಜೆ.ಝಾನ್ಸಿ ರಾಯ್ ಇತರರಿದ್ದರು. 
ಮೈಸೂರು

22 ಫಲಾನುಭವಿಗಳಿಗೆ ಮನೆ ಹಂಚಿಕೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಏಕಲವ್ಯ ನಗರದಲ್ಲಿ ನಿರ್ಮಿಸಲಾಗಿರುವ ಮನೆಗಳ ಪೈಕಿ 22 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮುಖಾಂತರ ಮಂಗಳವಾರ ಹಂಚಿಕೆ
  • ಇನ್ನೊಬ್ಬರಿಗೆ ಬಾಡಿಗೆ, ಭೋಗ್ಯ ಹಾಕಿ ಪುನಾ ಕೊಳಗೇರಿಗಳಲ್ಲಿ ವಾಸಿಸಬಾರದು
ಮೈಸೂರು: ಚಾಮರಾಜ ಕ್ಷೇತ್ರದಲ್ಲಿನ ವಿವಿಧ ಕೊಳಗೇರಿ ಪ್ರದೇಶ ನಿವಾಸಿಗಳಿಗೆ ಜೆಎನ್-ನರ್ಮ್  ಬಿ.ಎಸ್.ಯು.ಪಿ. ಯೋಜನೆಯಡಿ ಏಕಲವ್ಯ ನಗರದಲ್ಲಿ ನಿರ್ಮಿಸಲಾಗಿರುವ ಮನೆಗಳ ಪೈಕಿ 22 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮುಖಾಂತರ ಮಂಗಳವಾರ ಹಂಚಿಕೆ ಮಾಡಿದರು.  
ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಏಕಲವ್ಯನಗರ ಬಡಾವಣೆಯಲ್ಲಿ ಜೆಎನ್-ನರ್ಮ್  ಬಿ.ಎಸ್.ಯು.ಪಿ. ಯೋಜನೆಯಡಿ ನಿರ್ಮಿಸಲಾಗಿರುವ ಜಿ+3 ಮಾದರಿ ವಸತಿ ಸಮುಚ್ಚ್ಛಯಗಳಲ್ಲಿ ಖಾಲಿ ಇರುವ ಮನೆಗಳನ್ನು ಹಂಚಿಕೆ ಮಾಡಲು ನಿಯಮಾನುಸಾರ ಫಲಾನುಭವಿಗಳ ಪಟ್ಟಿ ಸಿದ್ಧ್ದಪಡಿಸಿದ್ದು, ಸುಮಾರು ವರ್ಷಗಳಿಂದ ಹಂಚಿಕೆ ಮಾಡಿರಲಿಲ್ಲ. ಇದೀಗ 22 ಫಲಾನುಭವಿ ಮನೆ ಹಂಚಿಕೆ ಮಾಡಿದ್ದು, ಉಳಿಕೆ ಇರುವ ಮನೆಗಳನ್ನು ಸಹ ಫಲಾನುಭವಿಗಳ ಪಟ್ಟಿಯಲ್ಲಿರುವಂತೆ ಪರಿಶೀಲಿಸಿ ಲಾಟರಿ ಮುಖಾಂತರ ಅವರಿಗೂ ಹಂಚಿಕೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
 ಫಲಾನುಭವಿಗಳು ನಿಗದಿಪಡಿಸಿದ ಹಣ ಪಾವತಿಸಿ, ಎಲ್ಲ ದಾಖಲೆ ಪಡೆದುಕೊಂಡು, ಹಂಚಿಕೆಯಾಗಿರುವ ಮನೆಯಲ್ಲೇ ವಾಸಿಸಬೇಕು. ಅದನ್ನು ಇನ್ನೊಬ್ಬರಿಗೆ ಬಾಡಿಗೆ, ಭೋಗ್ಯ ಹಾಕಿ ಪುನಾ ಕೊಳಗೇರಿಗಳಲ್ಲಿ ವಾಸಿಸಬಾರದು ಎಂದು ಹೇಳಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಮಹಮ್ಮದ್ ಜಫ್ರುಲ್ಲಾ, ಎಇಇ ಜಿ.ಎಸ್. ರಾಮಚಂದ್ರ, ಎಇ ಜೆ.ಝಾನ್ಸಿ ರಾಯ್ ಹಾಗೂ ದೇವರಾಜ ಬ್ಲಾಕ್ ಅಧ್ಯಕ್ಷ ಡಿ.ನಾಗಭೂಷಣ್,  ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು
 ಇತರರಿದ್ದರು.