ಕೊಪ್ಪ ಅಂಗಡಿ ಮುಂಭಾಗದಲ್ಲೇ ಸೌದೆ ಒಲೆಯಿಂದ ಅಡುಗೆ ಮಾಡುತ್ತಿರುವ ಹೋಟೆಲ್ ಮಾಲೀಕ ಮಹೇಶ್.
- ಸೌದೆ ಒಲೆಯಲ್ಲಿ ಅಡುಗೆ ಮಾಡುವ ಸ್ಥಿತಿ
ಬೈಲುಕುಪ್ಪೆ: ಗ್ಯಾಸ್ ಅಭಾವದಿಂದಾಗಿ ಕೊಪ್ಪ ಗ್ರಾಮದ ಹೋಟೆಲ್ ಮುಂಭಾಗದಲ್ಲೇ ಸೌದೆ ಒಲೆಯಿಂದ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಮಾದೇಶ್ವರ ಹೋಟೆಲ್ ಮಾಲೀಕ ಮಹೇಶ್, ಮಾತನಾಡಿ ಹೋಟೆಲ್ ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಮಾಮೂಲಿ ಬರುವ ಜನರಿಗೆ ತುಂಬಾ ತೊಂದರೆಯಾಗಿದ್ದು. ನಾವು ಸುಧಾ ಮೂರು ದಿನ ಹೋಟೆಲ್ ಬಂದು ಮಾಡಲಾಗಿತ್ತು, ಇಂದಿನಿಂದ ಸೌದೆ ಒಲೆ ಅಳವಡಿಸಿಕೊಂಡು ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಬರುವ ಜನರಿಗೆ ಅಡುಗೆ ಮಾಡಿಲಾಗುತ್ತಿದೆ ಎಂದು ತಿಳಿಸಿದರು.