ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮತ್ತು ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸುಮನಾ ನರಸಿಂಹಮೂರ್ತಿ, ಬಿ.ಬಸವರಾಜು, ಎಂ.ಯೋಗೇಂದ್ರ, ಕೆ.ಎನ್.ಸೋಮಶೇಖರ್, ಎಂ.ಪಿ.ಚಂದ್ರಶೇಖರ್, ಸಿ.ಚನ್ನಯ್ಯ ಇತರರಿದ್ದರು. 
ಮೈಸೂರು

ಮಾಸ್ಟರ್ಸ್ ಅಥ್ಲೆಟಿಕ್ಸ್ ಸಾಧಕರಿಗೆ ಸನ್ಮಾನ

ಮೈಸೂರು: ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 46ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕ ಪಡೆದ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅಶೋಕಪುರಂ ರೈಲು ನಿಲ್ದಾಣದ ಬಳಿಯ ಆರ್‌ಎನ್‌ಎಂ ಎಂಟರ್‌ಪ್ರೈಸಸ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದಕ ಬೇಟೆಯಾಡಿದ ಎಚ್.ಎಂ. ಭಾರತಿ, ವಿಜಯಾ ರಮೇಶ್, ಎಂ.ಮಂಜಮ್ಮ, ಬಿ.ಸಿ.ಪಾರ್ವತಿ , ಕೆ.ಎಂ. ಭಾಗೀರಥಿ, ಶರ್ಮಿಳಾ ಅರಸ್, ಸಿ.ಬಿ. ಚಲುವೇಗೌಡ , ಎಸ್.ಮಹದೇವು, ಜಿ.ಶ್ರೀನಿವಾಸ, ಎಂ.ಯೋಗೇಂದ್ರ, ಎನ್.ಮಂಜು ಅವರನ್ನು ಸನ್ಮಾನಿಸಲಾಯಿತು.
ಜತೆಗೆ ಕೋಲಾರದಲ್ಲಿ ನಡೆದ 44ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಸುಜಾತಾ, ಟಿ.ಎಸ್.ಸುಬ್ಬಲಕ್ಷ್ಮೀ, ಎನ್.ಆರ್.ಶೋಭಾ, ವಿ.ರೇಖಾ, ಟಿ.ಜಿ.ಆಶಾ, ಎಲ್.ಜಿ.ಸುಷ್ಮಾ, ಜಯಲಕ್ಷ್ಮೀ, ಎ.ವಿ.ಆಶಾ, ಪಿ.ಜಿ. ಚಂದ್ರಶೇಖರ್, ಆರ್.ಮಹಾದೇವರಾವ್, ಬಿ.ಎಸ್.ನರಸಿಂಹ ಪ್ರಸಾದ್, ಸೋಮೇಗೌಡ, ಎ.ಸಿ.ಸುಬ್ಬಯ್ಯ, ಬೋರೇಗೌಡ, ಎ. ಪೆಮ್ಮಯ್ಯ, ಎಂ.ಶಶಿಧರ ಕುಟ್ಟಿ, ಅಶೋಕ್ ಕುಮಾರ್, ಕೆ.ಎಸ್.ರಘುನಂದನ್, ಎ.ಟಿ.ಬೋಪಣ್ಣ ಹಾಗೂ ಬಲರಾಮೇಗೌಡ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಸುಮನಾ ನರಸಿಂಹಮೂರ್ತಿ, ಕಾರ್ಯದರ್ಶಿ ಬಿ. ಬಸವರಾಜು, ಪದಾಧಿಕಾರಿಗಳಾದ ಕೆ.ಎನ್.ಸೋಮಶೇಖರ್, ಎಂ.ಪಿ.ಚಂದ್ರಶೇಖರ್, ಸಿ.ಚನ್ನಯ್ಯ ಇತರರಿದ್ದರು.