ಸರಗೂರು ತಾಲೂಕಿನ ಎಂಸಿ ತಳಲು ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಆಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಲ್ಲೇಸ್ವಾಮಿ, ಮಂಜುಳಾ, ಎ.ರಾಜು ಇತರರು ಇದ್ದರು.
ತಾಲೂಕಿನ ಎಂಸಿ ತಳಲು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಆಶ್ರಯದಲ್ಲಿ 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕನ್ನಡ ಮಾಧ್ಯಮದ ತಾಲೂಕಿನ 11 ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತ ಕಾರ್ಯದರ್ಶಿ ಮಲ್ಲೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ನಿವೃತ್ತ ಉಪನಿರ್ದೇಶಕಿ ಮಂಜುಳಾ ಅವರು ವಿದ್ಯಾರ್ಥಿಗಳಾದ ಬಿ.ಎಸ್.ಬಂಗಾರ, ಅಮೂಲ್ಯ, ಎನ್.ಎಸ್.ಕಾವ್ಯಾ, ಸ್ಪೂರ್ತಿ, ಅರ್ಚನಾ, ಗಣೇಶ, ಸಹನಾ, ಭವ್ಯಶ್ರೀ, ರವಿ, ಅಶ್ವಿನಿ ಹಾಗೂ ರಮೇಶ್ ಅವರನ್ನು ಸನ್ಮಾನಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎ.ರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಪ್ರಕಾಶ್, ಭವಾನೀಶ್, ಮಂಜೇಶ್, ಪ್ರತಿಷ್ಠಾನದ ಎ.ಸಂಗಪ್ಪ ಹಾಗೂ ವಿದ್ಯಾರ್ಥಿಗಳ ಪಾಲಕರು ಇದ್ದರು.