ಅತಿ ಹೆಚ್ಚು ಹಾಲು ಪೂರೈಸಿದ ಉತ್ಪಾದಕರನ್ನು ಬಂಡಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಸನ್ಮಾನಿಸಲಾಯಿತು. ಕೆ.ಉಮಾಶಂಕರ್, ಲೀಲಾ ನಾಗರಾಜ್, ಬಿ.ಗುರುಸ್ವಾಮಿ, ಎಲ್.ಶಿವಲಿಂಗೇಗೌಡ, ಕರಿಯಪ್ಪ, ಡಾ.ಕೆ.ಕೆ.ಸುನೀಲ್ ಕುಮಾರ್ ಇದ್ದರು.
ಮೈಸೂರು: ತಾಲೂಕಿನ ಕಸಬಾ ಹೋಬಳಿ ಬಂಡಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಉತ್ಪಾದಕರನ್ನು ಸನ್ಮಾನಿಸಲಾಯಿತು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೆ.ಉಮಾಶಂಕರ್ ಮಾತನಾಡಿ, ಒಕ್ಕೂಟದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವ್ಯವಸ್ಥಾಪಕ ಎಲ್.ಆರ್.ಕರಿಬಸವರಾಜ ಮಾತನಾಡಿ, ಒಕ್ಕೂಟದ ಹಾಲು ಶೇಖರಣೆ, ದರ ಪಾವತಿ, ಹಾಲಿನ ಜೈವಿಕ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ಡಾ.ಎಂ.ಪರಮೇಶ್ ಮಾತನಾಡಿ ಸಂಘದ ವಹಿವಾಟಿನಲ್ಲಿ ಪ್ರಸ್ತುತ ವರ್ಷದಲ್ಲಿ ಸಂಘಕ್ಕೆ 43,47,769 ರೂ. ಲಾಭಾಂಶ ಬಂದಿದ್ದು, ಇದರಲ್ಲಿ 28,42,369 ರೂ.ಗಿಂತ ಹೆಚ್ಚು ಹಣವನ್ನು ಉತ್ಪಾದಕರಿಗೆ ಬೋನಸ್ ನೀಡಲಾಗುವುದು. ಸಂಘವು 7,26,34,457 ರೂ. ಬಟವಾಡೆ ಮಾಡಿರುತ್ತದೆ ಎಂದು ತಿಳಿಸಿದರು.
ಅತಿ ಹೆಚ್ಚು ಹಾಲು ವಿತರಿಸಿದ ಬಸವರಾಜು, ಶೋಭಾ, ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ನಿರ್ದೇಶಕಿ ಲೀಲಾ ನಾಗರಾಜ್, ಸರ್ಕಾರದ ನಾಮನಿರ್ದೇಶಿತ ಬಿ.ಗುರುಸ್ವಾಮಿ, ಸಂಘದ ಅಧ್ಯಕ್ಷ ಎಲ್.ಶಿವಲಿಂಗೇಗೌಡ, ಉಪಾಧ್ಯಕ್ಷ ಕರಿಯಪ್ಪ, ತಾಲೂಕು ಮೇಲ್ವಿಚಾರಕ ಡಾ.ಕೆ.ಕೆ.ಸುನೀಲ್ ಕುಮಾರ್, ವಿಸ್ತರಣಾಧಿಕಾರಿ ಸಂತೋಷ್ ಕುಮಾರ್, ಡಾ.ಎಂ.ಪರಮೇಶ್, ಆಡಳಿತ ಮಂಡಳಿಯ ನಿರ್ದೇಶಕಕರಾದ ಪ್ರಸನ್ನ ಕುಮಾರ್, ನಾಗೇಶ್, ಸಿ.ಸಂಜೀವಕುಮಾರ್, ಎಸ್.ಪುಟ್ಟದಾಸ, ನಾಗರತ್ನ, ಎಸ್.ಸವಿತಾ, ಬಸವರಾಜು, ಜೆ.ಮಂಜು, ಸಿಬ್ಬಂದಿ ವರ್ಗದವರಾದ ರಾಜೇಶ್ ಜೆ.ಚಂದ್ರ, ಕುಮಾರಸ್ವಾಮಿ, ಸುದೀಪ್, ದರ್ಶನ್ ಇತರರು ಉಪಸ್ಥಿತರಿದ್ದರು.