ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬಿ.ಆರ್.ಉಮಾಕಾಂತ್, ಸಿ.ಚಿಕ್ಕಲಿಂಗಸ್ವಾಮಿ, ಸಿ.ಎಸ್.ಚಂದ್ರಶೇಖರ್, ಮರಿಯಾದಾಸ್ ಇತರರಿದ್ದರು.
ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘದ ವತಿಯಿಂದ ಬುಧವಾರ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಪಿಂಚಣಿದಾರರ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಬಿ.ನಿಂಗೇಗೌಡ, ಪಾಪಯ್ಯ, ಸಿದ್ದಯ್ಯ, ಮಹಮದ್ ಇಕ್ಬಾಲ್, ಎನ್.ಶಾಂತಮ್ಮ, ತಿಮ್ಮರಾಯಗೌಡ, ಪಿ.ಮುರಾರಿ, ರಾಜಲಕ್ಷ್ಮೀ, ಸಿ.ಶ್ರೀನಿವಾಸಯ್ಯ, ಬಿ.ಗಂಗಾಧರಯ್ಯ, ಜಿ.ಎಸ್.ಸಿದ್ದರಾಜು, ಜಿ.ಪ್ರಭುಸ್ವಾಮಿ, ಎಚ್.ಕೆ.ಗುಂಡೂರಾವ್, ಬಸವಾರಾಧ್ಯ, ಎ.ಸರೋಜಾ, ನಾಗರಾಜಶೆಟ್ಟಿ, ಎಸ್.ಉಮಾದೇವಿ, ಸಿದ್ದಪ್ಪಾಜಿ, ನಜೀರ್, ಜಯಕೃಷ್ಣ ಮೂರ್ತಿ, ವಿಶಾಲಾಕ್ಷಮ್ಮ, ಎಚ್.ಡಿ.ಜಯಶೀಲ, ಮಹಮದ್, ಮಹದೇವಯ್ಯ, ಮಹದೇವ, ವೈ.ಎಸ್.ರಾಮಸ್ವಾಮಿ, ಎಂ.ಎಸ್.ನಾಗರಾಜ, ಆರ್.ಗೋಪಾಲ ಕೃಷ್ಣ, ಎಂ.ರಾಮಮ್ಮ, ಕೆ.ಎಸ್.ಸಿದ್ದರಾಮೇಗೌಡ, ಪದ್ಮಾ, ಬಿ.ಆರ್.ಬಸವರಾಜ್, ಲಿಂಗಣ್ಣಯ್ಯ, ಕೆ.ಕಸ್ತೂರಿ, ಎಸ್.ಸುಜಾತಾ, ಕೃಷ್ಣಮೂರ್ತಿ, ಸಂಪತ್‌ಕುಮಾರ್, ಚಿನ್ನಪ್ಪ ಇತರರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಆರ್.ಉಮಾಕಾಂತ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎನ್.ಓಬಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಚಿಕ್ಕಲಿಂಗಸ್ವಾಮಿ, ಖಜಾಂಚಿ ಸಿ.ಎಸ್.ಚಂದ್ರಶೇಖರ್, ಉಪಾಧ್ಯಕ್ಷರಾದ ಮರಿಯಾದಾಸ್, ಕೆ.ಟಿ.ವೀರಪ್ಪ, ಕೆ.ಎಂ.ನಾಗರಾಜು, ಪುಟ್ಟು ಇತರರಿದ್ದರು.