ಮೈಸೂರು

ಸಂಗೀತ ವಿಶ್ವವಿದ್ಯಾಲಯದಿಂದ ಮೂವರಿಗೆ ಗೌರವ ಡಾಕ್ಟರೇಟ್

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಮೂವರು ಸಾಧಕರು ಭಾಜನರಾಗಿದ್ದಾರೆ.
ರಂಗಭೂಮಿ ಕ್ಷೇತ್ರದಿಂದ ರಂಗಕರ್ಮಿ ಎಚ್.ಜನಾರ್ದನ(ಜನ್ನಿ), ಸಂಗೀತ ಕ್ಷೇತ್ರದಿಂದ ಪ್ರೊ.ಬಿ.ಆರ್.ಶೇಷಾದ್ರಿ ಅಯ್ಯಂಗಾರ್ ಮತ್ತು ಜಾನಪದ ಕ್ಷೇತ್ರದಿಂದ ಜಾನಪದ ಸಂಗೀತ ಕಲಾವಿದ ಜಿ.ಎಂ.ಶಿವಪ್ರಸಾದ್(ಗೊಲ್ಲಹಳ್ಳಿ ಶಿವಪ್ರಸಾದ್) ಈ ಗೌರವಕ್ಕೆ ಆಯ್ಕೆಯಾಗಿದಾರೆ.
ನ.8ರಂದು ಬೆಳಗ್ಗೆ 11.30ಕ್ಕೆ ಸಂಗೀತ ವಿವಿಯಲ್ಲಿ ನಡೆಯುವ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಡಾ.ಕೆ.ವಿ.ನಾಗರಾಜಮೂರ್ತಿ, ಡಾ.ಶಿವಕುಮಾರ್ ಕಣಸೋಗಿ, ಡಾ.ಎಚ್.ಕೆ.ಶೀಲಾ ಶ್ರೀಧರ್, ಡಾ.ಕೆ.ಎಂ.ಕುಮಾರಸ್ವಾಮಿ, ಡಾ. ಕೆಂಪೇಗೌಡ, ಡಾ.ರಶ್ಮಿ ಪ್ರಸಾದ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುತ್ತದೆ.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕೇರಳದ ಕಲಾಮಂಡಲಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಅನಂತಕೃಷ್ಣನ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಸಚಿವ(ಮೌಲ್ಯಮಾಪನ) ಪ್ರೊ.ಎಂ.ಜಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿನ್ನದ ಪದಕ ವಿಜೇತರು

ಸ್ನಾತಕೋತ್ತರ ಪದವಿ:

ಕರ್ನಾಟಕ ಸಂಗೀತ ಗಾಯನ ವಿಭಾಗದಲ್ಲಿ ವಿ.ಲತಾ ಅವರು 5 ಚಿನ್ನದ ಪದಕ, ಭರತನಾಟ್ಯ ವಿಭಾಗದಲ್ಲಿ ಎ.ಶ್ರವ್ಯಾ 6 ಚಿನ್ನದ ಪದಕ, ಹಿಂದುಸ್ತಾನಿ ಸಂಗೀತ ಗಾಯನ ವಿಭಾಗದಲ್ಲಿ ಡಿ.ಎನ್.ಇಂದ್ರಕುಮಾರ 3 ಚಿನ್ನದ ಪದಕ, ನಾಟಕ ವಿಭಾಗದಲ್ಲಿ ಎಸ್.ಶ್ರೀಕಾಂತ ಮತ್ತು ಸಿ.ನಂಜುಂಡಸ್ವಾಮಿ ತಲಾ 1 ಚಿನ್ನದ ಪದಕ.


ಸ್ನಾತಕ ಪದವಿ:

ರ್ನಾಟಕ ಸಂಗೀತ ಗಾಯನ ವಿಭಾಗದಲ್ಲಿ ಪಿ.ಪುನೀತ 4 ಚಿನ್ನದ ಪದಕ, ಹಿಂದುಸ್ತಾನಿ ಸಂಗೀತ ಗಾಯನ ವಿಭಾಗದಲ್ಲಿ ಎಂ.ಸಂಜಯ್ 2 ಚಿನ್ನದ ಪದಕ, ಭರತನಾಟ್ಯ ವಿಭಾಗದಲ್ಲಿ ಎಂ.ಬಿ. ಸುಜನಾ 1 ಚಿನ್ನದ ಪದಕ.