ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಮಹೇಶ್ ಕಣಕದಾಳು, ವಸಂತ್ ಕುಮಾರ್, ಚಂದ್ರು ಸ್ವಾಮಿ, ರಾಜನ್, ಮಂಜುನಾಥ್ ಸಿಂಗ್ ಇತರರು ಇದ್ದರು.
- , ಭಯೋತ್ಪಾದನೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ
- ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನೆ
ಮೈಸೂರು: ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದ ವಿದ್ವಂಸಕ ಕೃತ್ಯ ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಭಯೋತ್ಪಾದನೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಧಿಕ್ಕಾರ, ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಧಿಕ್ಕಾರ, ಕೋಡ್‌ವರ್ಡ್ ಬಳಸಿ ಸಂವಹನ ನಡೆಸುತ್ತಿದ್ದ ಭಯೋತ್ಪಾದಕರಿಗೆ ಧಿಕ್ಕಾರ, ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಮತಾಂಧರ ವಿರುದ್ಧ ಕ್ರಮವಹಿಸಿ ಎಂಬಿತ್ಯಾದಿ ಘೋಷಣೆ ಕೂಗಿದರು.
ಸಂಘಟನೆಯ ದಕ್ಷಿಣ ಪ್ರಾಂತ ಸಹಸಂಚಾಲಕ ಮಹೇಶ್ ಕಣಕದಾಳು ಮಾತನಾಡಿ, ಬುರ್ಖಾ ಭವಿಷ್ಯದಲ್ಲಿ ಆಂತರಿಕ ಸುರಕ್ಷತೆಗೆ ಬೆದರಿಕೆಯೊಡ್ಡಲಿದೆ. ಅದನ್ನು ಧರಿಸಿ ಬಂದರೆ ಪುರುಷ, ಮಹಿಳೆ, ಭಯೋತ್ಪಾದಕ ಯಾರೆಂದು ತಿಳಿಯುವುದಿಲ್ಲ ಎಂಬ ಮಾತು ಇತ್ತು. ಆದರೆ ಈಗ ಮುಸ್ಲಿಂ ಮಹಿಳೆಯರೂ ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಗೊತ್ತಾಗುತ್ತಿದೆ. ಅವರು ಬುರ್ಖಾ ಹಾಕಿ ಈ ದೇಶಕ್ಕೆ ಮಾರಕವಾಗುವ ಸಾಧ್ಯತೆ ಇದ್ದು, ದೇಶದಲ್ಲಿ ಬುರ್ಖಾ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನ ಧಾರ್ಮಿಕ ವಿಚಾರಗಳನ್ನು ತಿಳಿಸುವ ಕೇಂದ್ರಗಳಾಗಿವೆ. ಧಾರ್ಮಿಕ ಮುಖಂಡರು ಮಸೀದಿ, ಮದರಸದಲ್ಲೂ ಒಳ್ಳೆಯ ವಿಚಾರ ತಿಳಿಸುತ್ತಿದ್ದೇವೆ. ನಮ್ಮ ಧರ್ಮ ಶಾಂತಿಯನ್ನು ಬಯಸುತ್ತದೆ. ಕೊಲ್ಲುವ ವಿಚಾರ ಒಪ್ಪುವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಹಿಂದು ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾದ ಪ್ರಕರಣಗಳಲ್ಲಿ ಆರೋಪಿಗಳು ಮಸೀದಿಯಲ್ಲಿ ಪತ್ತೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಭಯೋತ್ಪಾದನೆಯ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಯಾರೇ ಆಗಲಿ ತಪ್ಪು ಮಾಡಿದವರನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಪದಾಧಿಕಾರಿಗಳಾದ ವಸಂತ್ ಕುಮಾರ್, ಚಂದ್ರು ಸ್ವಾಮಿ, ರಾಜನ್, ಮಂಜುನಾಥ್ ಸಿಂಗ್ ಇತರರು ಇದ್ದರು.