- ಮಕ್ಕಳ ಸೇರಿ ಎಲ್ಲ ವಯೋಮಾನದವರಿಗೆ ಈಜು ತರಬೇತಿಗೆ ಬೇಸಿಗೆ ಶಿಬಿರ ಆಯೋಜನೆ
- ಮಾರ್ಚ್ 23ರಿಂದ ಏಪ್ರಿಲ್ 12ರವರೆಗೆ ಮೊದಲ ಅವಧಿಯ ಕ್ಯಾಂಪ್ ಆರಂಭ
- ಏಪ್ರಿಲ್ 13 ರಿಂದ ಮೇ 9 ಹಾಗೂ ಮೇ 4 ರಿಂದ ಮೇ 24ರ ವರೆಗೆ ಎರಡನೇ ಹಾಗೂ ಮೂರನೇ ಶಿಬಿರ ನಡೆಯಲಿದೆ
- ಬೇಸಿಗೆ ಶಿಬಿರ ಸೇರಿದಂತೆ ಕಾಂಪಿಟೇಷನ್ ಬ್ಯಾಚ್, ಬೇಸಿಕ್ ಬ್ಯಾಚ್, ಅಡ್ವಾನ್ಸ್ ಬ್ಯಾಚ್, ಸಾರ್ವಜನಿಕರ ಬ್ಯಾಚ್ ಮತ್ತು ಮಹಿಳೆಯರ ಬ್ಯಾಚ್‌ಗಳು
ಮೈಸೂರು: ನಗರದ ಈಜು ಪ್ರಿಯರು ಮತ್ತು ಈಜುಪಟುಗಳಿಗೆ ಇಲ್ಲೊಂದು ಸಿಹಿ ಸುದ್ದಿ...! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ವಲಯದ ಮೊದಲ ಒಳಾಂಗಣ ಈಜುಕೊಳದಲ್ಲಿ ಈಜುವ ಅವಕಾಶ ದೊರೆತಿದೆ. ಮಾರ್ಚ್ 23ರಿಂದ ಏಪ್ರಿಲ್ 12ರವರೆಗೆ ಮೊದಲ ಅವಧಿಯ ಕ್ಯಾಂಪ್ ಆರಂಭವಾಗಲಿದೆ.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳವೀಗ ಮೂಲ ಸೌಕರ್ಯಗಳೊಂದಿಗೆ ‘ಹೈಟೆಕ್ ಒಳಾಂಗಣ’ ಈಜುಕೊಳವಾಗಿ ಬದಲಾವಣೆಗೊಂಡಿದ್ದು, ಈಜು ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿದೆ.
ಇದೀಗ ಈಜುಕೊಳದಲ್ಲಿ ಮಕ್ಕಳ ಸೇರಿ ಎಲ್ಲ ವಯೋಮಾನದ ಈಜು ತರಬೇತಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಮಾರ್ಚ್ 23ರಿಂದ ಏಪ್ರಿಲ್ 12ರವರೆಗೆ ಮೊದಲ ಅವಧಿಯ ಕ್ಯಾಂಪ್ ಆರಂಭವಾಗಲಿದೆ. ಬೆಳಗ್ಗೆ 6 ರಿಂದ 7, 7 ರಿಂದ 8, 8 ರಿಂದ 9 , 9 ರಿಂದ 10 ಹಾಗೂ ಮಧ್ಯಾಹ್ನ 3.30 ರಿಂದ 4.30 ಮಕ್ಕಳು ಮತ್ತು ವಯಸ್ಕರರಿಗೆ ಕ್ಯಾಂಪ್ ನಡೆಯಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಬೆಳಗ್ಗೆ 10 ರಿಂದ 11, 14 ವರ್ಷದ ಮಕ್ಕಳಿಗೆ ಸಂಜೆ 4.30 ರಿಂದ 5.30, 5.30 ರಿಂದ 6.30, 10 ವರ್ಷದೊಳಗಿನ ಮಕ್ಕಳಿಗೆ 6.30 ರಿಂದ 7.30 ಹಾಗೂ 7.30 ರಿಂದ 8.30 ನಡುವೆ ಕ್ಯಾಂಪ್ ನಡೆಯಲಿದೆ. ಬಳಿಕ ಏಪ್ರಿಲ್ 13 ರಿಂದ ಮೇ 9 ಹಾಗೂ ಮೇ 4 ರಿಂದ ಮೇ 24ರ ವರೆಗೆ ಎರಡನೇ ಹಾಗೂ ಮೂರನೇ ಶಿಬಿರ ನಡೆಯಲಿದೆ.
8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳಕ್ಕೆ ಮೇಲ್ಛಾವಣಿ ನಿರ್ಮಿಸುವ ಕಾಮಗಾರಿಗೆ ದಸರಾ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಈಜುಕೊಳ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ.
ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್
ಇದೀಗ ಈಜುಕೊಳದಲ್ಲಿ ಬೇಸಿಗೆ ಶಿಬಿರ ಸೇರಿದಂತೆ ಕಾಂಪಿಟೇಷನ್ ಬ್ಯಾಚ್, ಬೇಸಿಕ್ ಬ್ಯಾಚ್, ಅಡ್ವಾನ್ಸ್ ಬ್ಯಾಚ್, ಸಾರ್ವಜನಿಕರ ಬ್ಯಾಚ್ ಮತ್ತು ಮಹಿಳೆಯರ ಬ್ಯಾಚ್‌ಗಳು ಆರಂಭವಾಗಿವೆ. ಬಿರು ಬಿಸಿಲಿನ ಬೇಗೆಯಿಂದ ಬಸವಳಿಯುತ್ತಿರುವ ಸಾಂಸ್ಕೃತಿಕ ನಗರಿಯ ಜನರು, ಸೂರ್ಯನ ತಾಪಮಾನದಿಂದ ಪಾರಾಗಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳಕ್ಕೆ ಧಾವಿಸುತ್ತಿದ್ದಾರೆ. ದಿನೇ ದಿನೆ ಏರುತ್ತಿರುವ ತಾಪಮಾನದಿಂದ ತತ್ತರಿಸಿರುವ ಜನರು, ಜಲಕ್ರೀಡೆಗಳತ್ತ ಮುಖ ಮಾಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈಜುಕೊಳ ಹೈಟೆಕ್ ಸ್ಪರ್ಶದೊಂದಿಗೆ ಆಹ್ವಾನಿಸುತ್ತಿದೆ.
ಈಜುಕೊಳದಲ್ಲಿ ದಿನ ಬೆಳಗ್ಗೆ 6 ಗಂಟೆಯಿಂದ 9.40 ಗಂಟೆವರೆಗೆ ಹಾಗೂ ಮಧ್ಯಾಹ್ನ 12 ಗಂಟೆಯಿಂದ ಸಂಜೆ 3.40 ರವರೆಗೆ ಈಜುಕೊಳದಲ್ಲಿ ನಾನಾ ಬ್ಯಾಚ್ ನಡೆಯುತ್ತಿವೆ. ಬೆಳಗ್ಗೆ 11ರಿಂದ 11.40 ರ ನಡುವೆ ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ಇದೆ.
ಅನುಭವಿ ತರಬೇತುದಾರರು ಇದ್ದಾರೆ
ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಕಾಂಪಿಟೇಷನ್, ವಾರ್ಮ್‌ಅಪ್ , ಚಿಲ್ಡ್ರನ್ಸ್ ನಿರ್ಮಿಸಲಾಗಿದೆ. ಉಳಿದಂತೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಿಸುವ ಕೊಠಡಿ, ಸ್ನಾನಗೃಹ, ಶವರ್ ವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಜುಕೊಳದಲ್ಲಿ ಅನುಭವಿ ತರಬೇತುದಾರರು, ಇನ್‌ಸ್ಟ್ರಕ್ಟರ್, ಜೀವ ರಕ್ಷಕರು, ಸಕ್ಷನ್ ಎಳೆಯುವವರು, ಸ್ವಚ್ಛತಾಗಾರರು, ಪಾಸ್/ಟಿಕೆಟ್ ಚೆಕ್ ಮಾಡುವವರು, ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2018ರಲ್ಲಿ ಈಜುಕೊಳ ಉದ್ಘಾಟನೆ
3.25 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಕಾಮಗಾರಿಗೆ 2012ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಬಳಿಕ 3.25 ಕೋಟಿ ರೂ. ಇದ್ದ ಯೋಜನಾ ಮೊತ್ತವನ್ನು 4.97 ಕೋಟಿ ರೂ.ಗಳಿಗೆ ವಿಸ್ತರಣೆ ಮಾಡಲಾಯಿತು. ಈಜು ಕೊಳದ ಕಾಮಗಾರಿ 5 ವರ್ಷಗಳ ಬಳಿಕ ಪೂರ್ಣಗೊಂಡು 2018 ರಿಂದ ಸಾರ್ವಜನಿಕರಿಗೆ ಈಜುಕೊಳ ಮುಕ್ತಗೊಳಿಸಲಾಗಿತ್ತು. ಇದೀಗ ಮೇಲ್ಛಾವಣಿ ನಿರ್ಮಿಸಲಾಗಿದೆ.
ಮಾರ್ಚ್ 23ರಿಂದ ಬೇಸಿಗೆ ಶಿಬಿರ
ಮಕ್ಕಳ ಸೇರಿ ಎಲ್ಲ ವಯೋಮಾನದ ಈಜು ತರಬೇತಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಮಾರ್ಚ್ 23ರಿಂದ ಏಪ್ರಿಲ್ 12ರವರೆಗೆ ಮೊದಲ ಅವಧಿಯ ಕ್ಯಾಂಪ್ ಆರಂಭವಾಗಲಿದೆ. ಬೆಳಗ್ಗೆ 6 ರಿಂದ 7, 7 ರಿಂದ 8, 8 ರಿಂದ 9 , 9 ರಿಂದ 10 ಹಾಗೂ ಮಧ್ಯಾಹ್ನ 3.30 ರಿಂದ 4.30 ಮಕ್ಕಳು ಮತ್ತು ವಯಸ್ಕರರಿಗೆ ಕ್ಯಾಂಪ್ ನಡೆಯಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಬೆಳಗ್ಗೆ 10 ರಿಂದ 11, 14 ವರ್ಷದ ಮಕ್ಕಳಿಗೆ ಸಂಜೆ 4.30 ರಿಂದ 5.30, 5.30 ರಿಂದ 6.30, 10 ವರ್ಷದೊಳಗಿನ ಮಕ್ಕಳಿಗೆ 6.30 ರಿಂದ 7.30 ಹಾಗೂ 7.30 ರಿಂದ 8.30 ನಡುವೆ ಕ್ಯಾಂಪ್ ನಡೆಯಲಿದೆ. ಬಳಿಕ ಏಪ್ರಿಲ್ 13 ರಿಂದ ಮೇ 9 ಹಾಗೂ ಮೇ 4 ರಿಂದ ಮೇ 24ರ ವರೆಗೆ ಎರಡನೇ ಹಾಗೂ ಮೂರನೇ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.8147145346/8951282592 ಸಂಪರ್ಕಿಸಬಹುದು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ಮೇಲ್ಛಾವಣಿ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ರೀತಿಯ ಸೌಕರ್ಯಗಳೊಂದಿಗೆ ಈಜುಕೊಳಕ್ಕೆ ‘ಹೈಟೆಕ್ ಸ್ಪರ್ಶ’ ನೀಡಲಾಗಿದೆ.
ಬಿಸಿಲಿನ ಬೇಗೆಯಿಂದ ಪಾರಾಗಲು ನಿತ್ಯ ಸ್ನೇಹಿತರ ಜತೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳಕ್ಕೆ ಬರುತ್ತಿದ್ದೇನೆ. ಈಜುಕೊಳಕ್ಕೆ ಮೇಲ್ಛಾವಣಿ ನಿರ್ಮಿಸಿ ಹೈಟೆಕ್ ಸ್ಪರ್ಶ ನೀಡಿರುವುದು ಖುಷಿಯಾಗಿದೆ.