ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಶ್ರೀ ಹಸ್ತಿಕೇರಿ ಮಠದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶ್ರೀಪ್ರಕಾಶ್ ಯೋಗಿ, ಶ್ರೀ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಡಾ.ನವೀನ್, ಡಾ.ಸೈವಾಲಿನ್ ಇತರರು ಇದ್ದರು. 
ಮೈಸೂರು

ಹಸ್ತಿಕೇರಿ ಮಠದಲ್ಲಿ ಆರೋಗ್ಯ ಸೇವೆ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ
ತಿ.ನರಸೀಪುರ: ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಹಸ್ತಿಕೇರಿ ಮಠದಲ್ಲಿ ಶುಕ್ರವಾರ ವಿಕಾಸ ವೇದಿಕೆ ಟ್ರಸ್ಟ್, ಪತಂಜಲಿ ಇಂಟರ್ ನ್ಯಾಷನಲ್ ಯೋಗಾಶ್ರಮ, ಸಮೃದ್ಧಿ ಪಾಲಿಕ್ ಕ್ಲಿನಿಕ್ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ಡಯಾಬಿಟಿಸ್, ರಕ್ತದೊತ್ತಡ, ಗ್ಯಾಸ್ಟ್ರಿಕ್ ಮತ್ತು ಇತರ ರೋಗಿಗಳನ್ನು ಪರೀಕ್ಷಿಸಿ ಔಷಧ ನೀಡಲಾಯಿತು. ಪಟ್ಟಣದ ನೂರಾರು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಡಾ.ನವೀನ್, ಡಾ.ಸೈವಾಲಿನ್ ಸೇರಿದಂತೆ ನಿಂಗರಾಜು, ಯೋಗೇಶ್, ಕಪಿಲ್ ರಾವ್ ಹಾಗೂ ಸಿಬ್ಬಂದಿ ವೈದ್ಯಕೀಯ ಪರೀಕ್ಷೆ ನಡೆಸಿದರು.
ವಿಕಾಸ ವೇದಿಕೆ ಟ್ರಸ್ಟ್ ಸಂಚಾಲಕ ಪ್ರಕಾಶ್ ಯೋಗಿ ಮಾತನಾಡಿ, ರಾಜ್ಯಾದ್ಯಂತ ಯೋಗ ಶಿಬಿರಗಳ ಮೂಲಕ ಲಕ್ಷಾಂತರ ಜನರಿಗೆ ಯೋಗ ಶಿಕ್ಷಣದ ಜತೆಗೆ ಹೊರ ರಾಜ್ಯದಲ್ಲೂ ಯೋಗ ಶಿಬಿರವನ್ನು ಆಯೋಜಿಸಿದ್ದೇವೆ. ಅಲ್ಲಿನ ಸಾಕಷ್ಟು ಜನ ಯೋಗ ಶಿಬಿರದ ಪ್ರಯೋಜನ ಪಡೆದುಕೊಂಡು ನಿರೋಗಿಗಳಾಗಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ತಲಕಾಡು ಹಸ್ತಿಕೇರಿ ಮಠದ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮಿಗಳು ನನಗೆ ಮೊದಲ ಯೋಗ ಗುರುಗಳು ಎಂದು ತಿಳಿಸಿದರು.
ಮಠದ ಶ್ರೀಗಳಾದ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಶಿಬಿರದಲ್ಲಿ ಅನೇಕ ಚಿಕಿತ್ಸಾ ಪದ್ಧತಿಗಳಾದ ಯೋಗ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ನೇತ್ರ ಚಿಕಿತ್ಸೆ, ಸಮನ್ವಯ ಚಿಕಿತ್ಸೆ ಇನ್ನಿತರ ಹಲವು ಚಿಕಿತ್ಸಾ ಪದ್ಧತಿಯನ್ನು ನಡೆಸಿ ಈ ಭಾಗದಲ್ಲಿನ ಜನರಿಗೆ ಉಪಯೋಗವಾಗುವಂತೆ ಮಾಡಿದ್ದೇವೆ ಎಂದರು.
ಬೆಂಗಳೂರಿನ ಪಿ.ಜಿ.ಪಾಂಡುರಂಗ ಶೆಟ್ರು, ಮಲ್ಲಣ್ಣ, ಮಠದ ಸೇವಾನಿರತ ಮಹೇಶ್ ಮಾಹಿಶ್ರೀ, ಯಜಮಾನ್ ಚನ್ನಬಸವಣ್ಣ, ಪಾಪಣ್ಣ, ಮಹದೇವಪ್ಪ, ಗ್ರಾ.ಪಂ ಮಾಜಿ ಸದಸ್ಯ ನಾಗರಾಜು ಇತರರು ಇದ್ದರು.