ಚಿಕ್ಕ ಹೊಸೂರು ಗ್ರಾಮದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ರಾಜೇಗೌಡ ಉದ್ಘಾಟಿಸಿದರು. ಜಿ.ಕೆ. ಜಗನ್, ಐಕೆಪಿ ಹೆಗಡೆ, ಸಿ.ಎಸ್. ರೇಣುಕಾ ಸ್ವಾಮಿ, ರಾಮಚಂದ್ರು, ಚೇತನ್ ಇತರರು ಇದ್ದರು. 
ಮೈಸೂರು

ಕಲುಷಿತ ಆಹಾರದಿಂದ ಆರೋಗ್ಯ ಸಮಸ್ಯೆ ಹೆಚ್ಚು

ಎ. ಆರ್. ರಘುರಾಮ
ಬೈಲುಕುಪ್ಪೆ: ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಕಲುಷಿತಗೊಳ್ಳುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ರೋಟರಿ ಮಿಟ್ ಟೌನ್ ವಲಯ 6ರ ಸಹಾಯಕ ಗೌರ್ನರ್ ತಿರುಮಲಾಪುರದ ರಾಜೇಗೌಡ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಪಂ ವ್ಯಾಪ್ತಿಯ ಚಿಕ್ಕ ಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ತಾಲೂಕು ರೋಟರಿ ಮಿಟ್ ಟೌನ್ ವತಿಯಿಂದ ಬೈಲುಕುಪ್ಪೆ ಶ್ರೀಲಕ್ಷ್ಮೀ ಹೆಲ್ತ್‌ಕೇರ್ ಸೆಂಟರ್, ನಂದಿ ಮೆಡಿಕಲ್ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲೂಕು ರೋಟರಿ ಮಿಟ್ ಟೌನ್ ಅಧ್ಯಕ್ಷ ಜಿ.ಕೆ. ಜಗನ್ ಮಾತನಾಡಿ, ನಮ್ಮ ಸಂಸ್ಥೆ ಯಾವುದೇ ಪ್ರತಿಫಲದ ನಿರೀಕ್ಷೆ ಇಟ್ಟುಕೊಳ್ಳದೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅಂಗನವಾಡಿಗಳ ಸಬಲೀಕರಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಚೇತನ್, ಕೊಪ್ಪ ಗ್ರಾಪಂ ಸದಸ್ಯ ಸಿ.ಎಸ್. ರೇಣುಕಾಸ್ವಾಮಿ, ರಾಮಚಂದ್ರ, ಗಿರೀಶ್, ತಾಲೂಕು ಖಜಾಂಚಿ ಐ.ಕೆ.ಪಿ. ಹೆಗಡೆ, ಹೇಮೇಶ್, ಡಾ. ಸುಜಾತ, ಸಿಬ್ಬಂದಿಗಳಾದ ಪುಷ್ಪಾ, ಸುನಿತಾ, ಗ್ರಾಮಸ್ಥರಾದ ಸೋಮಯ್ಯ, ದಾಸು, ಪದ್ಮ, ದೇವಕಿ, ರೇವಮ್ಮ, ಸರೋಜಮ್ಮ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.