ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಹಲ್ಲರೆ ಮಠಾಧ್ಯಕ್ಷ ಶ್ರೀ ಬಸವಣ್ಣ ಸ್ವಾಮೀಜಿ ಉದ್ಘಾಟಿಸಿದರು. ನಂದಿನಿ ಮಹೇಶ್, ಭ್ರಮರಾಂಬಿಕೆ ಇತರರು ಇದ್ದರು. 
ಮೈಸೂರು

ಹಲ್ಲರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಂಜನಗೂಡು: ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಂಜನಗೂಡಿನ ಶ್ರೀ ಗುರು ಮಲ್ಲೇಶ್ವರ ಮಹಿಳಾ ಸೌಹಾರ್ದ ಸಂಘ ಹಾಗೂ ಮೈಸೂರಿನ ಬೃಂದಾವನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಆರೋಗ್ಯ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶ್ರೀ ಗುರು ಮಲ್ಲೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ನಂದಿನಿ ಮಹೇಶ್ ಮಾತನಾಡಿ, ಗ್ರಾಮೀಣ ಭಾಗದ ಜನರು ತಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಹಕಾರ ಸಂಘದಿಂದ ತಾಲೂಕಿನ ಗ್ರಾಮಗಳಲ್ಲಿ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಸುಮಾರು 200 ಮಂದಿ ಉಚಿತ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಹಲ್ಲರೆ ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠಾಧ್ಯಕ್ಷ ಶ್ರೀ ಬಸವಣ್ಣ ಸ್ವಾಮೀಜಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷೆ ಭ್ರಮರಾಂಬಿಕೆ, ನಿರ್ದೇಶಕರಾದ ಉಷಾ, ಚೈತ್ರಾ, ಭಾಗ್ಯಾ, ರೇಣುಕಾ ರಾಜು, ಶ್ವೇತಾ, ಮುಖ್ಯ ಶಿಕ್ಷಕ ಮನೋಹರ್, ಗೌಡಿಕೆ ಶೇಖರ್, ಬಸವರಾಜ್, ಮುಳ್ಳೂರು ವೃಷಭೇಂದ್ರಪ್ಪ, ಪರಶಿವಮೂರ್ತಿ, ಶಿವಮೂರ್ತಿ, ಮಹದೇವಸ್ವಾಮಿ, ಬೃಂದಾವನ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.