ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು. ಭಾಸ್ಕರ್, ಕೃಷ್ಣ, ಜೈಶಂಕರ್, ವೆಂಕಟೇಶ್, ಜವರನಾಯಕ ಮತ್ತಿತರರಿದ್ದರು. 
ಮೈಸೂರು

ಪುರಾತತ್ವ ಇಲಾಖೆಯಿಂದ ಶ್ರೀರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ

ಎಚ್.ಡಿ.ಕೋಟೆ: ಪುರಾತನ ಶ್ರೀರಾಮಲಿಂಗೇಶ್ವರ ದೇವಸ್ಥಾನವನ್ನು ಪುರಾತತ್ವ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದ 3 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶ್ರೀರಾಮಲಿಂಗೇಶ್ವರ ದೇವಸ್ಥಾನದ ಕೆಲವು ಕಟ್ಟಡ ದುರಸ್ತಿ, ನೆಲ ಹಾಸು, ಆವರಣ, ಕಾಂಪೌಂಡ್ ನಿರ್ಮಾಣವನ್ನು ಮೊದಲ ಹಂತದಲ್ಲಿ 1 ಕೋಟಿ 4 ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತದೆ, ಉಳಿಕೆ ಹಣ ಬಿಡುಗಡೆಯಾದ ನಂತರ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮದ ಜನತೆ ಒಗ್ಗೂಡಿ ದೇವಾಲಯದಲ್ಲಿ ನಡೆಯುವ ಪೂಜಾ ಕೈಂಕರ್ಯ, ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿರುವುದು ಶ್ಲಾಘನೀಯ ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಭಾಸ್ಕರ್, ಆದಿ ಕರ್ನಾಟಕ ಯಜಮಾನ ಕೃಷ್ಣ, ಗ್ರಾಮದ ಮುಖಂಡ ಜೈಶಂಕರ್, ವೆಂಕಟೇಶ್, ಜವರನಾಯಕ, ಭಾಸ್ಕರ್, ಅಶೋಕ್, ವೆಂಕಟೇಶ್, ವೀರಾಜ ನಾಯಕ, ರಾಜೇಶ್, ಸ್ವಾಮಿ, ರಾಜನಾಯಕ, ಅಜಾರ್, ಮಂಚನಾಯಕ, ನಾಗಣ್ಣ, ಕೃಷ್ಣೇಗೌಡ, ಪಿಡಿ ಅವ್ವಯಮ್ಮ, ಪ್ರಧಾನ ಅರ್ಚಕ ಎಸ್.ವಿ.ಜಯತೀರ್ಥ, ಸಿದ್ದು, ಇಸ್ಮಾಯಿಲ್, ರುದ್ರ, ಮತಿನ್, ಶ್ರೀನಿವಾಸ್, ಸುದರ್ಶನ್, ಸಿದ್ದರಾಜು, ಮಂಜುಶೆಟ್ಟಿ, ನಾಗರಾಜು, ಪ್ರಸನ್ನ ಮತ್ತಿತರರು ಹಾಜರಿದ್ದರು.