ತಿಲಕ್‌ನಗರದಲ್ಲಿರುವ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರಿನ 69ನೇ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಡಾ.ಎನ್.ಕೃಷ್ಣೇಗೌಡ, ಸಿದ್ದೇಗೌಡ, ಎಚ್.ಬಿ. ಸುರೇಶ್, ಜೆ.ಲೋಕೇಶ್, ಜಯಕುಮಾರ್, ಆರ್.ರಂಗಸ್ವಾಮಿ, ಡಾ.ಪ್ರಭಾ ಮಂಡಲ್ ಇತರರಿದ್ದರು. 
ಮೈಸೂರು

ಅಧ್ಯಕ್ಷರಾಗಿ ಎಚ್.ಬಿ. ಸುರೇಶ್ ಆಯ್ಕೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಕ್ಲಬ್ ಆಫ್ ಮೈಸೂರಿನ 69ನೇ ಪದಗ್ರಹಣ ಸಮಾರಂಭ
ನಗರದ ತಿಲಕ್‌ನಗರದಲ್ಲಿರುವ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರಿನ 69ನೇ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
2026-27ನೇ ಸಾಲಿನ ಅಧ್ಯಕ್ಷರಾಗಿ ಎಚ್.ಬಿ. ಸುರೇಶ್, ಕಾರ್ಯದರ್ಶಿಯಾಗಿ ಜೆ.ಲೋಕೇಶ್, ಖಜಾಂಚಿಯಾಗಿ ಎಸ್.ಎಂ. ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಶಿವರಾಜು ಸೇರಿದಂತೆ ನೂತನ ತಂಡ ಪದಗ್ರಹಣ ಮಾಡಿತು. ಫಾಸ್ಟ್ ಮಲ್ಟಿಪಲ್ ಚೇರ್ಮನ್ ಡಾ. ಎನ್. ಕೃಷ್ಣೇಗೌಡ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಡಾ.ಎನ್.ಕೃಷ್ಣೇಗೌಡ ಮಾತನಾಡಿ, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ 109 ವರ್ಷಗಳನ್ನು ಪೂರೈಸಿದ್ದು, ಜಗತ್ತಿನ ಯಾವುದೇ ಮೂಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುವ ಸೇವಾ ಸಂಸ್ಥೆಯಾಗಿದೆ ಎಂದರು.
ಲಯನ್ಸ್ ಕ್ಲಬ್ ಆಫ್ ಮೈಸೂರು ದಕ್ಷಿಣ ಭಾರತದಲ್ಲೇ ಆರಂಭಗೊಂಡ ಎರಡನೇ ಲಯನ್ಸ್ ಕ್ಲಬ್ ಆಗಿದ್ದು, ಇದೀಗ 69 ವರ್ಷಗಳನ್ನು ಪೂರೈಸಿದೆ. ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಸಂಸ್ಥೆಯನ್ನು ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಸ್ಥೆಯು ಸ್ವಂತ ಲಯನ್ಸ್ ಭವನ ಹೊಂದಿದ್ದು, ಸೇವಾ ಮನೋಭಾವದಿಂದ ಬನ್ನಿಮಂಟಪದಲ್ಲಿ ಲಯನ್ಸ್ ಶಾಲೆಯನ್ನು ನಡೆಸುತ್ತಿದೆ. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಅಂಗವಾಗಿ ಬನ್ನಿಮಂಟಪದ ಲಯನ್ಸ್ ಶಾಲೆಯ ಶಿಕ್ಷಕರಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು. ವೈದ್ಯಕೀಯ ವೆಚ್ಚಕ್ಕಾಗಿ ಪೂಜಾ ಅವರಿಗೆ 20 ರೂ.ಸಾವಿರ ನೆರವು ನೀಡಲಾಯಿತು. ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗಾಗಿ 10 ರೂ. ಸಾವಿರ ಮೊತ್ತದ ಚೆಕ್‌ನ್ನು ಲಯನ್ ಬಿ. ಭಾರತಿ ಅವರು ನೀಡಿದರು.
2ನೇ ಉಪಜಿಲ್ಲಾ ರಾಜ್ಯಪಾಲ ಸಿದ್ದೇಗೌಡ ಸಂಸ್ಥೆಯ ಡೈರಿ ಬಿಡುಗಡೆ ಮಾಡಿದರು. ಪಿಎಸ್‌ಟಿ ಫೋರಂನ ಜಯಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಆರ್.ರಂಗಸ್ವಾಮಿ, ಮಾಜಿ ರಾಜ್ಯಪಾಲ ಡಾ. ಪ್ರಭಾ ಮಂಡಲ್, ಪ್ರಾಂತೀಯ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ವಲಯ ಅಧ್ಯಕ್ಷ ನಿಂಗರಾಜು, ನಿಕಟಪೂರ್ವ ಅಧ್ಯಕ್ಷ ಲಯನ್ ಕೃಷ್ಣಮೂರ್ತಿ ಇತರರಿದ್ದರು.