ಹುಣಸೂರು ತಾಲೂಕು ಹಳೇಪುರ ಗ್ರಾಮದಲ್ಲಿ ಹನುಮದ್ ವ್ರತವನ್ನು ಗ್ರಾಮಸ್ಥರು ಆಚರಿಸಿದರು.
- ಆಂಜನೇಯ ಉತ್ಸವಮೂರ್ತಿ ಮೆರವಣಿಗೆ
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಹಳೇಪುರ ಗ್ರಾಮದ ಹನುಮ ಸಮಿತಿ ವತಿಯಿಂದ ಆಯೋಜಿಸಿದ್ದ 7ನೇ ವರ್ಷದ ಹನುಮದ್‌ವ್ರತ ಅದ್ದೂರಿ ನಡೆಯಿತು.
ಶನಿವಾರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ಮುಖಂಡ ಬೀರೇಶ್‌ಗೌಡ ಸೇರಿದಂತೆ ವಿವಿಧ ಕೋಮಿನ ಯಜಮಾನರು ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು. ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಟ್ರ್ಯಾಕ್ಟರ್‌ನಲ್ಲಿ ಆಂಜನೇಯನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಗಾರಿ ಸದ್ದಿಗೆ ಯುವಕರು. ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.