ಹನಗೋಡು ಹೋಬಳಿ ಬಿ.ಆರ್.ಕಾವಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೇರಳಕುಪ್ಪೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಗಣ್ಯರು ಉದ್ಘಾಟಿಸಿದರು. ಬಿಇಒ ಮಹದೇವ್, ಹೇಮಲತಾ, ಪ್ರವೀಣ್, ಧರ್ಮರಾಜ್, ರಮೇಶ್, ನೀಲಕಂಠ, ರಂಗಸ್ವಾಮಿ ಇದ್ದರು. 
ಮೈಸೂರು

ಪ್ರತಿಭಾ ಕಾರಂಜಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ

ಲಲಾಟಾಕ್ಷ ಎಸ್
ಹನಗೋಡು: ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳಲ್ಲಿ ಹುದುಗಿರುವ ಕಲಾತ್ಮಕತೆಯನ್ನು ಅನಾವರಣಗೊಳಿಸುವ ಹಾಗೂ ಮನರಂಜನೆಯ ಹಬ್ಬವಾಗಿದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ತಿಳಿಸಿದರು.
ಹನಗೋಡು ಹೋಬಳಿಯ ಬಿ.ಆರ್.ಕಾವಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೇರಳಕುಪ್ಪೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲವನ್ನು ಗುರುತಿಸುವ ಸೂಕ್ತ ವೇದಿಕೆಯಾಗಿದೆ. ಇದರಲ್ಲಿ ಯಶಸ್ವಿ ಮಕ್ಕಳಿಗೆ ಪ್ರಶಂಸಾ ಪತ್ರಗಳು ಮತ್ತು ಬಹುಮಾನಗಳನ್ನು ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೀಲಕಂಠ, ಬಿಆರ್‌ಪಿ ಹೇಮಲತಾ, ತಾಪಂ ಮಾಜಿ ಸದಸ್ಯೆ ರೂಪಾ ನಂದೀಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಧರ್ಮರಾಜು, ಇಸಿಒ ಕೇಶವಮೂರ್ತಿ, ಮುಖ್ಯ ಶಿಕ್ಷಕ ಪ್ರವೀಣ್, ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ತೀರ್ಥ ಕುಮಾರ್, ರುದ್ರನಾಯಕ್, ಸುರೇಶ, ಮಂಜುನಾಥ್, ಸುಶೀಲಾ, ವಿದ್ಯಾಶ್ರೀ, ಬಿ.ಡಿ.ರಮೇಶ್, ಮುಖಂಡರಾದ ಕಾಳೇಗೌಡ, ವಕೀಲ ಗಣೇಶ್, ವೀಣಾ, ನಾಗರಾಜ್, ಪಾಲಕರು ಇದ್ದರು.