ಗ್ಯಾಸ್ ಸೋರಿಕೆಯಿಂದ ಮೃತಪಟ್ಟ ಇಬ್ಬರು ಹೆಣ್ಣು ಮಕ್ಕಳ ಪಾಲಕರಾದ ಬೆಟ್ಟದಪುರದ ಅಲ್ತಾಫ್ ಪಾಶ -ಸುರೈಯಾ ದಂಪತಿಗೆ ಸಿಎಂ ಪರಿಹಾರದ ನಾಲ್ಕು ಲಕ್ಷ ರೂ. ಚೆಕ್ಕನ್ನು ಸಚಿವ ಕೆ.ವೆಂಕಟೇಶ್ ಹಸ್ತಾಂತರಿಸಿದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅಲ್ತಾಫ್ ಪಾಶ ಮಾತ್ತು ಸುರೈಯಾ ದಂಪತಿಯ ಇಬ್ಬರು ಹೆಣ್ಣು ಮಕ್ಕಳು ಡಿ.5ರಂದು ಗ್ಯಾಸ್ ಸೋರಿಕೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಬುಧವಾರ ಸಿಎಂ ಪರಿಹಾರ ನಿಧೀಯ ನಾಲ್ಕು ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಚೆಕ್ ಹಸ್ತಾಂತರಿಸಿದ ಪಶು ಸಂಗೋಪನ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು. ಕಳೆದು ಹೋದ ಜೀವ ಮತ್ತೆ ಬರುವುದಿಲ್ಲ, ಆದರೆ ಅವರ ಸಂಕಷ್ಟಕ್ಕೆ ನಮ್ಮ ಸರ್ಕಾರ ಜತೆ ಇರುವ ಮೂಲಕ ನೇರವಾಗಿದೆ. ಬೆಳೆದು, ಬಾಳಬೇಕಾದ ಇಬ್ಬರು ಹೆಣ್ಣು ಮಕ್ಕಳು ಕಣ್ಣ ಮುಂದೆ ಸಾವಿಗೀಡಾದ ದೃಶ್ಯ ನೋಡುವ ಕೆಟ್ಟ ಘಳಿಗೆ ಯಾವ ಪಾಲಕರಿಗೂ ಬಾರದಿರಲಿ ಎಂದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ತಾಲೂಕು ಆಶ್ರಯ ಮತ್ತು ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ತಹಸೀಲ್ದಾರ್ ಜೆ.ನಿಸರ್ಗಪ್ರಿಯ, ಉಪತಹಸೀಲ್ದಾರ್ ಶಶಿಧರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಾಫಿವುಲ್ಲಾ, ಸುಹೇಲ್ ಪಾಷಾ, ಎಕ್ಬಾಲ್ ಪಾಷಾ, ಪುಟ್ಟರಾಜು, ಹನೀಫ್, ುುಖಂಡರು ಇದ್ದರು.