ಹನಗೋಡಿನಲ್ಲಿ ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶ್ರೀಸವಿತಾ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ವರ್ಷಾ ಹರೀಶ್‌ಗೌಡ ಉದ್ಘಾಟಿಸಿದರು. ಎಚ್ ಆರ್ ರಮೇಶ್, ಕಿರಂಗೂರು ಬಸವರಾಜ್, ಮುದುಗನೂರು ಸುಭಾಷ್, ದಾ.ರಾ.ಮಹೇಶ್, ಗೋವಿಂದರಾಜ್, ನಟೇಶ್ ಇದ್ದರು.
ಯುವಕರು ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶ್ರೀಸವಿತಾ ಮಹರ್ಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಹಾಗೂ ಸಹಬಾಳ್ವೆ ಬೆಳೆಸುವ ಮೂಲಕ ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಪತ್ನಿ ವರ್ಷಾ ಹರೀಶ್‌ಗೌಡ ಸಲಹೆ ನೀಡಿದರು.
ಹನಗೋಡಿನಲ್ಲಿ ಮಂಗಳವಾರ ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶ್ರೀಸವಿತಾ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮಾಜವು ಕಾಯಕ ಸಮುದಾಯದ ಪ್ರಮುಖ ಅಂಗವಾಗಿದ್ದು, ಗ್ರಾಮಮಟ್ಟದಲ್ಲಿ ಜಯಂತ್ಯುತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಚಾರ. ಸವಿತಾ ಸಮಾಜದ ಏಳಿಗೆಗೆ ನಮ್ಮ ಕುಟುಂಬ ಸದಾ ಸಹಕಾರ ನೀಡಲು ಸಿದ್ಧವಿದ್ದು, ಸಮುದಾಯದ ಪ್ರಮುಖ ಬೇಡಿಕೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಿವಶರಣ ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಬಸವಣ್ಣ ಅವರ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. ಅಂದಿನಿಂದಲೂ ಸವಿತಾ ಸಮಾಜ ಪ್ರಾಮಾಣಿಕತೆ ಹಾಗೂ ಕಾಯಕಕ್ಕೆ ಮಹತ್ವ ನೀಡುತ್ತಾ ಬಂದಿದೆ. ಅವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಎಚ್.ಆರ್.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ಮುದುಗನೂರು ಸುಭಾಷ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಗ್ರಾಮದ ಮುಖಂಡರಾದ ನಂಜಪ್ಪ, ಚೆನ್ನಯ್ಯ, ಭರತವಾಡಿ ವೆಂಕಟೇಶ್, ರಾಜೇಗೌಡ, ಪ್ರಭಾಕರ್, ರೈಸ್‌ಮಿಲ್ ರಾಘು, ದೀಪು ಹಾಗೂ ಸಮಾಜದ ಮುಖಂಡರಾದ ಗೋವಿಂದರಾಜ್, ನಟೇಶ್, ಕುಮಾರ್ ಮತ್ತಿತರರು ಹಾಜರಿದ್ದರು.