ಹನಗೋಡು ಹೋಬಳಿಯ ಹಿಂಡುಗುಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಮಾರಮ್ಮ ದೇವಸ್ಥಾನದ ಪ್ರತಿಷ್ಠಾಪನಾ ಸಮಾರಂಭದಲ್ಲಿ ವಕೀಲ ಎಚ್.ಎನ್.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ರೋಹನ್ ವಿ.ಗಂಗಡಕರ್, ಕುಮಾರ್, ಶಿವಕುಮಾರ್, ರಮೇಶ್ ರಾಜೇಗೌಡ, ಚಂದ್ರಶೇಖರ, ಎಚ್.ಎನ್. ಗಿರೀಶ್, ರಮೇಶ್ ಶೇಖರ್ ಇತರರು ಇದ್ದರು.
ಹನಗೋಡು: ಮನುಷ್ಯ ಜನ್ಮದ ಸಾರ್ಥಕತೆ ಎಂದರೆ ಕೇವಲ ಹಣಕಾಸಿನ ಸಾಲ ತೀರಿಸುವುದಲ್ಲ. ತಂದೆ-ತಾಯಿ, ಸಮಾಜ ಹಾಗೂ ಹುಟ್ಟೂರಿನ ಬಗ್ಗೆ ಕೃತಜ್ಞತೆ ಸಲ್ಲಿಸುವುದೇ ನಿಜವಾದ ಋಣ ತೀರಿಸುವುದು ಎಂದು ವಕೀಲ ಎಚ್.ಎನ್.ವೆಂಕಟೇಶ್ ತಿಳಿಸಿದರು.
ಹನಗೋಡು ಹೋಬಳಿಯ ಹಿಂಡುಗುಡ್ಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾರಮ್ಮ ದೇವಸ್ಥಾನದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದಲ್ಲಿ ಮಾನವೀಯತೆ, ಸೇವಾ ಮನೋಭಾವ ಮತ್ತು ನೈತಿಕ ಬದುಕು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗೇರಿದವರು ತಮ್ಮ ಊರಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಮಂಜುಳಾ ಅವರನ್ನು ಸನ್ಮಾನಿಸಲಾಯಿತು.
ರೋಹನ್ ವಿ.ಗಂಗಡಕರ್, ಕುಮಾರ್, ಶಿವಕುಮಾರ್, ರಮೇಶ್ ರಾಜೇಗೌಡ, ಚಂದ್ರಶೇಖರ, ಎಚ್.ಎನ್. ಗಿರೀಶ್, ರಮೇಶ್ ಶೇಖರ್ ಇತರರು ಇದ್ದರು.