ಹನಗೋಡು ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಗೀತಾ ಸುರೇಶ್, ಕುಮಾರಸ್ವಾಮಿ, ಮಂಜು, ಪ್ರೀತಿ, ಶಾರದಾ, ಪುನೀತ್ ಇತರರು ಇದ್ದರು. 
ಮೈಸೂರು

ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವ

ಎಂ.ರವಿ
ಹನಗೋಡು: ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇದೆ.  ಕನ್ನಡಾಂಬೆಯ ಹಬ್ಬವನ್ನು  ಆಚರಣೆ ಮಾಡುವುದು ನಮ್ಮೆಲ್ಲರಿಗೂ  ಹೆಮ್ಮೆಯಾಗಿದೆ. ರಾಜ್ಯೋತ್ಸವವನ್ನು ಪ್ರತಿ ಹಳ್ಳಿ-ಹಳ್ಳಿಗಳಲ್ಲಿಯೂ ಹಬ್ಬದ ರೀತಿ ಆಚರಿಸುವಂತಗಾಬೇಕು. ಮೈಸೂರು ರಾಜ್ಯವನ್ನು  ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ ಅಂದಿನ ದೀಮಂತ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹುಣಸೂರು ತಾಲೂಕಿನವರೆಂಬ ಅಭಿಮಾನವಿದೆ. ಈ ಅಭಿಮಾನಕ್ಕೆ ನಾವು ಯಾವುದೇ ರೀತಿ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ  ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಕುಮಾರಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜು, ಶಿಕ್ಷಕರಾದ ಪ್ರೀತಿ, ಶಾರದಾ, ಪುನೀತ್, ಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಹಾಗೂ ನಾಡಧ್ವಜರೋಹಣ ನಡೆಸಲಾಯಿತು. ವಿದ್ಯಾರ್ಥಿಗಳು ಕನ್ನಡ ಗೀತಾ ಗಾಯನ ಹಾಗೂ ನೃತ್ಯ ಪ್ರದರ್ಶಿಸಿದರು.