ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ದೇವರಾಜ್ ಅವರು ವರ್ಗವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಹೊಂಗಯ್ಯ, ಗೀತಾ ಸುರೇಶ್, ರುಕ್ಮಿಣಿ, ಕುಮಾರ್, ಜವರಮ್ಮ ಸೇರಿದಂತೆ ಇತರರು ಇದ್ದರು. 
ಮೈಸೂರು

ಕರ್ತವ್ಯದಲ್ಲಿ ಪ್ರಾಮಾಣಿಕತೆ, ಬದ್ಧತೆ ತೋರಿ

ಎಂ.ರವಿ
ಹನಗೋಡು: ಸರ್ಕಾರಿ ನೌಕರರು ತಮ್ಮ  ಕರ್ತವ್ಯದಲ್ಲಿ ಪ್ರಾಮಾಣಿಕತೆ, ಬದ್ಧತೆ ತೋರಬೇಕು. ಆಗ ಅವರು ಮೇಲ್ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಇಒ ಹೊಂಗಯ್ಯ ತಿಳಿಸಿದರು.
ಹೋಬಳಿಯ ನೇರಳಕುಪ್ಪೆ ಗ್ರಾಪಂ ಪಿಡಿಒ ದೇವರಾಜ್ ಅವರು ವರ್ಗವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಶನಿವಾರ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿ, ತಮ್ಮ ಅನುಭವ, ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ ಆಗಿರುತ್ತಾರೆ. ಮೇಲ್ಮಟ್ಟದ ಅಧಿಕಾರಿಗಳು ನೀಡಿದ ಸೂಕ್ತ ಸಲಹೆ ಮತ್ತು ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ಕೆಲಸ ಮಾಡುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು ಎಂದರು. 
ಪಿಡಿಒ ದೇವರಾಜು ಅವರು ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ಜನಪ್ರತಿನಿಧಿಗಳು ಹಾಗೂ ಜನಮನ್ನಣೆ ಗಳಿಸಿರುವುದು ಸನ್ಮಾನ ಕಾರ್ಯಕ್ರಮ ಏರ್ಪಡಿಸಿರುವೇ ಸಾಕ್ಷಿ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಡಿಒ ದೇವರಾಜು, ನನಗೆ ಕೆಲಸ ಮಾಡಿದ ಸಂತೃಪ್ತಿ ಇದೆ. ಜನರ ಜತೆ ನೇರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಗ್ರಾಮೀಣ ಭಾಗದ ಜನರ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗಲ್ಲ. ಆದರೆ ನನಗೆ ಸಿಕ್ಕಿತ್ತು. ಈ ಅವಕಾಶಕ್ಕಾಗಿ ನಾನು ಚಿರಋಣಿ ಆಗಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಪಿಡಿಒಗಳಾದ ವರಲಕ್ಷ್ಮೀ, ಮಹದೇವ್, ಮಹೇಶ್, ನಟೇಶ್, ಸದಸ್ಯರಾದ ಕುಮಾರ್, ಅಮಾಸೇಗೌಡ, ಜಗದೀಶ್, ರಂಗಯ್ಯ, ಮಣಿಕಂಠ,  ಜವರಮ್ಮ, ನಾಣ್ಯಕುಮಾರಿ, ಚಂದ್ರಮ್ಮ, ಸಣ್ಣಕ್ಕ, ರೀಟಾ ಮುಖಂಡರಾದ ಸಣ್ಣತಮ್ಮೇಗೌಡ,  ಮಹದೇವ್, ಗಣೇಶ್, ಸುರೇಶ್, ನಟೇಶ್ ಸೇರಿದಂತೆ ಗ್ರಾಪಂ. ಸಿಬ್ಬಂದಿ ಇದ್ದರು.