ತಿ.ನರಸೀಪುರ ತಾಲೂಕಿನ ಹಿರಿಯೂರು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಗುರುಸ್ವಾಮಿ, ಉಪಾಧ್ಯಕ್ಷರಾಗಿ ಎಂ.ಗಿರೀಶ್(ಗಿರಿಮಲ್ಲಯ್ಯ) ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ನಾಗಪ್ಪ, ವೀರೇಂದ್ರ, ಮನೋಜ್ ಕುಮಾರ್, ನಂಜುಂಡಸ್ವಾಮಿ, ನಂಜುಂಡೇಗೌಡ ಇತರರು ಇದ್ದರು. 
ಮೈಸೂರು

ಗುರುಸ್ವಾಮಿ ಅಧ್ಯಕ್ಷ, ಗಿರೀಶ್ ಉಪಾಧ್ಯಕ್ಷ

ತಿ.ನರಸೀಪುರ: ತಾಲೂಕಿನ ಹಿರಿಯೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಗುರುಸ್ವಾಮಿ, ಉಪಾಧ್ಯಕ್ಷರಾಗಿ ಎಂ.ಗಿರೀಶ್ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದಲ್ಲಿರುವ ಸಹಕಾರ ಸಂಘದಲ್ಲಿ ಸೋಮವಾರ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾದಾಪುರ ಗ್ರಾಮದ ಎಂ.ಗುರುಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚೌಹಳ್ಳಿ ಗ್ರಾಮದ ಎಂ.ಗಿರೀಶ್(ಗಿರಿಮಲ್ಲಯ್ಯ) ಹೊರತು ಬೇರ‌್ಯಾರು ಉಮೇದುವಾರಿಕೆ ಸಲ್ಲಿಸ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.
ಸಂಘದ 12 ಮಂದಿ ನಿರ್ದೇಶಕರು ಹಾಜರಾಗಿದ್ದರು. ಚುನಾವಣಾ ಅಧಿಕಾರಿಯಾಗಿ ಎ.ಹಸೀನಾ ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷ ಎಂ.ಗುರುಸ್ವಾಮಿ ಮಾತನಾಡಿ, ಸಹಕಾರಿ ಸಂಘದ ಅಭಿವೃದ್ಧಿಗೆ ನಿರ್ದೇಶಕರ ಜತೆಗೂಡಿ ದುಡಿಯುತ್ತೇವೆ. ಈ ಭಾಗದ ರೈತರಿಗೆ ಬೆಳೆ ಸಾಲ ಸೇರಿದಂತೆ ಸರ್ಕಾರದ ಸಹಾಯಧನದಡಿ ನೀಡುವ ಸೌಲಭ್ಯಗಳನ್ನು ಕಾಲಕಾಲಕ್ಕೆ ಕಲ್ಪಿಸಿಕೊಡುತ್ತೇವೆ. ಗ್ರಾಮೀಣ ಪ್ರದೇಶಗಳ ಮಹಿಳಾ ಸಂಘಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷ ನಾಗಪ್ಪ, ನಿರ್ದೇಶಕರಾದ ಸಿ.ಎಸ್. ನಂಜುಂಡಸ್ವಾಮಿ, ಸಿ.ಎಸ್.ಪ್ರಭುಸ್ವಾಮಿ, ಎಸ್.ವೀರೇಶ, ಸಹಜಾನಂದಸ್ವಾಮಿ, ರಾಜೇಶ್ವರಿ, ಎಚ್.ಎಂ. ಕೋಮಲಾ, ಎಂ.ಎಸ್.ರಾಜಶೇಖರ ಮೂರ್ತಿ, ಎಚ್.ಎಂ.ಮನೋಜ್ ಕುಮಾರ್, ಎಂ.ರವಿಕುಮಾರ, ಗುರುಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಉಮೇಶ್, ಮುಖಂಡರಾದ ವೀರೇಂದ್ರ(ನವೀನ), ನೀಲಸೋಗೆ ನಂಜುಂಡಸ್ವಾಮಿ, ಹಿರಿಯೂರು ಶಿವಣ್ಣ, ನಂಜುಂಡೇಗೌಡ, ಗೌಡ್ರು ಸ್ವಾಮಿ, ವೀರಪ್ಪ, ರೇಣುಕಾ, ಶಾಂತಕುಮಾರ್ ಚೌಹಳ್ಳಿ ಸೇರಿದಂತೆ ಸಹಕಾರ ಸಂಘದ ವಿವಿಧ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಇದ್ದರು.