ಕೆ.ಆರ್.ನಗರದ ಪಟ್ಟಣದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನ ಹಾಗೂ 1997ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು. ಎಂ.ದೇವಲಿಂಗ ಸ್ವಾಮಿ, ಎ.ಕಾಂತರಾಜು, ಬಿ.ಎಸ್.ನಾಗರಾಜು, ಅಡ್ವೀಶ್, ಜ್ಞಾನದೇವ, ಮೋಹನ್ ಕುಮಾರ್, ನಂಜಪ್ಪ ಇದ್ದರು. 
ಮೈಸೂರು

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅವಶ್ಯಕ

ಲಲಾಟಾಕ್ಷ ಎಸ್
ಕೆ.ಆರ್.ನಗರ: ಇಂದಿನ ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಕೇವಲ ಪಠ್ಯಜ್ಞಾನ ಸಾಕಾಗುವದಿಲ್ಲ. ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದು ನಿವೃತ್ತ ಶಿಕ್ಷಕ ವಿ.ರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಹಾಗೂ 1997ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಗಳಲ್ಲಿ ಮೌಲ್ಯಾಧಾರಿತ ಪಾಠಗಳು, ಚರ್ಚೆಗಳು, ನಾಟಕಗಳು ಮತ್ತು ಸಮಾಜ ಸೇವಾ ಚಟುವಟಿಕೆಗಳನ್ನು ಪರಿಚಯಿಸಿದರೆ ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಗುಣಗಳನ್ನು ಬೆಳೆಸಬಹುದು. ಇಂತಹ ಶಿಕ್ಷಣವು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎಂ.ದೇವಲಿಂಗ ಸ್ವಾಮಿ, ಎ.ಕಾಂತರಾಜು, ಬಿ.ಎಸ್.ನಾಗರಾಜು, ಅಡ್ವೀಶ್, ಜ್ಞಾನದೇವ, ಮೋಹನ್ ಕುಮಾರ್, ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
ಜೆಎಸ್‌ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾತ್ಯಾಯಿನಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಬಳಿಗರ್, ವಿದ್ಯಾರ್ಥಿಗಳಾದ ಎಸ್.ಮಹೇಶ್, ಸೋ.ಸೋ.ಮೋಹನ್ ಕುಮಾರ್, ಗಂಗಾಧರ್ ಮುಳ್ಳೂರು, ಪ್ರಶಾಂತ್, ಲೋಹಿತ್ ಕುಮಾರ್, ರವಿಕುಮಾರ್ ಕೆ.ಆರ್, ಮಯೂರ, ಗಿರೀಶ್, ಅನಿಲ್ ಕುಮಾರ್, ಮಧು, ಶ್ವೇತಾರಾಣಿ, ಸರಿತಾ, ಸುನೀತಾ, ವಸಂತಿ ಮತ್ತಿತರರು ಉಪಸ್ಥಿತರಿದ್ದರು.