ಪಂಚ ಯೋಜನೆಗಳು ಅನುಷ್ಠಾನಗೊಂಡು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೇರ್ಯದಲ್ಲಿ ಸಸಿ ನೆಟ್ಟಿ ನೀರೆರೆಯುವ ಮೂಲಕ ಸಂಭ್ರಮಿಸಲಾಯಿತು. ಉದಯ್ ಶಂಕರ್, ಶೋಭಾ, ಮಮತಾ ಇತರರು ಇದ್ದರು.  
ಮೈಸೂರು

ಎಲ್ಲ ಅರ್ಹರಿಗೆ ತಲುಪುತ್ತಿದೆ ಗ್ಯಾರಂಟಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಸಮಿತಿ ತಾಲೂಕು ಅಧ್ಯಕ್ಷ ಉದಯ್ ಶಂಕರ್ ಹೇಳಿಕೆ
ಸಾಲಿಗ್ರಾಮ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಕುಟುಂಬ ಸದಸ್ಯರಿಗೆ ತಲುಪಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉದಯ್ ಶಂಕರ್ ತಿಳಿಸಿದರು.
ಪಂಚ ಯೋಜನೆಗಳು ಅನುಷ್ಠಾನಗೊಂಡು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಭೇರ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮಗಳ ಜನರಿಗೆ ಶಕ್ತಿ ಯೋಜನೆ, ಉದ್ಯೋಗ ನಿಧಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳು ಅರ್ಹರಿಗೆ ಶೇ. 98 ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಎಲ್ಲ ಸದಸ್ಯರು ರಾಜ್ಯದ್ಯಂತ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿಡಿಪಿಒ ಶೋಭಾ ಮಾತನಾಡಿ, ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ ಅನೇಕ ಜನ ಮೃತಪಟ್ಟಿದ್ದಾರೆ. ಅವರಿಗೂ ಹಣ ಹೋಗುತ್ತಿದೆ. ಇದನ್ನು ಪರಿವೀಕ್ಷಣೆ ಮಾಡುತ್ತಿದ್ದು, ಶೀಘ್ರದಲ್ಲೇ ಉಳಿದಿರುವ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಲಿದೆ. ಯಾವುದಕ್ಕೂ ಆತಂಕ ಪಡಬೇಡಿ ಎಂದರು.
ಪಿಡಿಒ ಮಮತಾ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ದುರ್ಬಲ ವರ್ಗದವರು ಆರ್ಥಿಕವಾಗಿ ಹೊರ ಹೊಮ್ಮಬೇಕು. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸಂಯೋಜಕ ನಂದೀಶ್, ಗ್ಯಾರಂಟಿ ಸಮಿತಿ ಸದಸ್ಯರಾದ ಚಿಕ್ಕ ಅಣಸೋಕೆ ಮೂರ್ತಿ, ಮಹದೇವ ನಾಯಕ, ವೆಂಕಟೇಶ್, ಮಂಜಪ್ಪ, ಉದೇಶ ನಾಯಕ, ಬೋರಪ್ಪ ನಾಯಕ, ಸಿದ್ದಯ್ಯ ನ್ಯಾಯಬೆಲೆ ಅಂಗಡಿ ಮಾಲೀಕ ರಾಜಶೇಖರ್ ಗೋಪಾಲ್, ಡಿಸೋಜ, ಅಶ್ವಿನಿ, ಗ್ರಾಪಂ ಮಾಜಿ ಸದಸ್ಯ ಯತಿರಾಜ್, ಕೃಷ್ಣೇಗೌಡ, ಚಂದ್ರಶೇಖರಯ್ಯ, ಡಿ.ಕೃಷ್ಣ ಪ್ರೇಮಕುಮಾರ್, ಜಯಂತ್ ಕುಮಾರ್ ಸೇರಿದಂತೆ ಅನೇಕರು ಇದ್ದರು.