ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ 3.07 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಮೂಗೂರು ಗ್ರಾಪಂ ಪಿಡಿಒ ಅವರ ಸುರ್ಪದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆ ಹಸ್ತಾಂತರಿಸಿ ಮಾತನಾಡಿದರು.  
ಮೈಸೂರು

ಹಿಂದುಳಿದವರ ಸ್ವಾವಲಂಬನೆಗೆ ಹೆಚ್ಚಿನ ಒತ್ತು

ಮೂಗೂರು: ಕೂಲಿ ಕಾರ್ಮಿಕರು, ಕೃಷಿಕರು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಸರೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಹಿರಿಯ ಜಿಲ್ಲಾ ನಿರ್ದೇಶಕ ವಿಜಯ ಕುಮಾರ್ ನಾಗನಾಳ ತಿಳಿಸಿದರು.
ಮೂಗೂರು ಗ್ರಾಮ ವ್ಯಾಪ್ತಿಯಲ್ಲಿನ ಸರ್ಕಾರಿ ಕೆರೆಯನ್ನು 915 ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ 3.07 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಮೂಗೂರು ಗ್ರಾಪಂ ಪಿಡಿಒ ಅವರ ಸುರ್ಪದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆ ಹಸ್ತಾಂತರಿಸಿ ಮಾತನಾಡಿದರು.
ಪುರ್ವಿಕರು ನಿರ್ಮಾಣ ಮಾಡಿದ ಕೆರೆಗಳು ನಮ್ಮದಲ್ಲ ಎಂದು ಹೇಳಿ ಅನೇಕ ಕೆರೆ-ಕಟ್ಟೆಗಳು ಹೂಳು ತುಂಬಿ ನಾಶವಾಗುತ್ತಿವೆ. ಅವರ ಆಶಯವನ್ನು ಮನಗಂಡು ನಾವುಗಳು ಹಳೆಯ ಕೆರೆ-ಕಟ್ಟೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊರಬೇಕಾಗಿದೆ. ಪ್ರತಿ ಗ್ರಾಮದ ಜನತೆಯಲ್ಲಿ ಇದು ನಮ್ಮದು ಎಂಬ ಭಾವನೆ ಬರಬೇಕು. ಹಾಗಾದಲ್ಲಿ ಮಾತ್ರ ಈ ಯೋಜನೆ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೆರೆ-ಕಟ್ಟೆಗಳಿಗೆ ಕಾಯಕಲ್ಪ ನೀಡಿ ಜೀವ ತುಂಬಿದೆ. ಇದನ್ನು ಉಳಿಸಿ ಬೆಳೆಸಲು ತಾವೆಲ್ಲರೂ ಕೈ ಜೋಡಿಸಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯಿತಿಯಿಂದ ಕೆರೆ ಅಭಿವೃದ್ಧಿ ಮತ್ತಷ್ಟು ಶ್ರಮಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೇವಲ ಸಾಮಾಜಿಕ ಸೇವಾ ಕಳಕಳಿ ಅಲ್ಲದೆ ಸಮಾಜದಲ್ಲಿನ ಹೀನ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ವಾತ್ಸಲ್ಯ ಮನೆ, ಮಾಸಾಶನ, ಕುಟುಂಬ ಬಲವರ್ಧನೆಗೆ ಆರ್ಥಿಕ ನೆರವು, ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಶ್ಲಾಘಿಸಿದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರುದ್ರಸ್ವಾಮಿ ಅವರು ಕೆರೆಗೆ ಹಾಸುಗಲಿನಿಂದ ಅಂತವನ್ನು ನಿರ್ಮಿಸಿ ಗಿಡಗಳನ್ನು ಹಾಕಿಸಿ ಸುಂದರ ತಾಣವನ್ನಾಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ, ತಾಲೂಕು ಯೋಜನಾಧಿಕಾರಿ ನಾಗೇಶ್ ನಾಯಕ್, ಪಿಡಿಒ ವಿ.ರೇಣುಕಾ, ಪುಷ್ಪಾ ರಾಜ್, ಮಾಜಿ ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಗ್ರಾಪಂ ಸದಸ್ಯ ಗೌರೀಶ್(ಮನು), ಚೇತನ್, ಒಕ್ಕೂಟದ ಅಧ್ಯಕ್ಷೆ ಸಾವಿತ್ರಮ್ಮ, ಶಿವೇಂದ್ರ, ಜಿಲ್ಲಾ ರೈತ ಸಂಘ ಒಕ್ಕೂಟದ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯ್ಕ, ಕೃಷಿ ಮೇಲ್ವಿಚಾರಕ ಶಿವಶಂಕರ್, ಕುಮಾರಿ, ನಳಿನಿ ನಟರಾಜ್, ಮಂಜುಳಾ ಪ್ರಕಾಶ್, ನಾಗರತ್ನಮ್ಮ, ಸೇವಾ ಪ್ರತಿನಿಧಿ ಚಿತ್ರ, ಚಂದ್ರಮ್ಮ, ಸಂಘದ ಸದಸ್ಯರು ಗ್ರಾಮಸ್ಥರು ಇದ್ದರು.