ತಿ.ನರಸೀಪುರದ ಅರುಂಧತಿ ಸಹಕಾರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ರಮೇಶ್ ಮಾದಾರ ಮಹಾಸಭಾದ ತಿ.ನರಸೀಪುರ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ಡಾ.ಪ್ರದೀಪ್, ಮಾದಪ್ಪ ಮಾದಿಗ ಇತರರಿದ್ದರು.
- ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್
- ಅರುಂಧತಿ ಸಹಕಾರ ಸಂಘದ ಕಚೇರಿ
ತಿ.ನರಸೀಪುರ: ಶಾಸಕರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಮಾದಿಗ ಸಮಾಜದ ಯಾವುದೇ ಫಲಾನುಭವಿಗೆ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅರುಂಧತಿ ಸಹಕಾರ ಸಂಘದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಾದಾರ ಮಹಾಸಭಾದ ಪದಾಧಿಕಾರಿಗಳ ಸಭೆಯಲ್ಲಿ ತಾಲೂಕು ಮಾದಾರ ಮಹಾಸಭಾದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ಸರ್ಕಾರದಿಂದ ವಿವಿಧ ಸವಲತ್ತುಗಳನ್ನು ವಿತರಿಸುವ ಕಮಿಟಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ.ಸರ್ಕಾರದಲ್ಲಿ ಇಂತಹ ಅನೇಕ ಕಮಿಟಿಗಳಿವೆ. ಈವರೆಗೆ ಮಾದಿಗ ಸಮುದಾಯದ ಒಬ್ಬನೇ ಒಬ್ಬ ವ್ಯಕ್ತಿಗೆ ಸವಲತ್ತು ದೊರೆತ ಉದಾಹರಣೆ ಇಲ್ಲ ಎಂದರು.
ಈಗಾಗಲೇ ಮಾದಾರ ಮಹಾಸಭಾಕ್ಕೆ 15ರಿಂದ 20 ಎಕರೆ ಜಮೀನು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಅಲ್ಲಿ ಕಾಲೇಜು, ಹೈಸ್ಕೂಲ್ ತೆರೆಯುವ ಉದ್ದೇಶ ಹೊಂದಲಾಗಿದೆ. ಮಾದಾರ ಮಹಾಸಭಾದ ಕಚೇರಿಗಾಗಿ ಜಯಮಹಲ್ನಲ್ಲಿ 2 ಎಕರೆ ಭೂಮಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವರ್ಗೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಮಾದಾರ ಮಹಾಸಭೆ ಕೆ.ಎಚ್.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಬಹಳ ದೊಡ್ಡ ಕೆಲಸ ಮಾಡಲಾಗಿದೆ ಎಂದರು.
ಮಾದಾರ ಮಹಾಸಭಾದ ಪಧಾಧಿಕಾರಿಗಳ ಪಟ್ಟಿ: ಮೂಗೂರು ಬಲ್ಲಯ್ಯ(ಅಧ್ಯಕ್ಷ), ವ್ಯಾಸರಾಜಪುರ ರಂಗಪ್ಪ(ಉಪಾಧ್ಯಕ್ಷ), ಸಿದ್ದನಹುಂಡಿ ನಟ(ಕಾರ್ಯದರ್ಶಿ), ಮಲಿಯೂರು ಸಿದ್ದಯ್ಯ(ಖಜಾಂಚಿ), ನಿರ್ದೇಶಕರಾಗಿ ವಾಟಾಳು ರಾಜು, ತಲಕಾಡು ರಾಜು, ಕುಪ್ಯ ರಾಜೇಶ್, ಬೈರಾಪುರ ನಾಗೇಶ್, ರಂಗಾಚಾರಿ ಹುಂಡಿ ಸುನೀಲ್,ಬನ್ನೂರು ಬೆಟ್ಟಯ್ಯ, ಹುಣಸೂರು ನಿಂಗರಾಜು, ಹೊಸಹಳ್ಳಿ ಚಿನ್ನಸ್ವಾಮಿ, ನರೀಪುರ ರಾಚಪ್ಪ, ವಿಜಯಪುರ ಕುಮಾರ ಅವರನ್ನು ಆಯ್ಕೆ ಮಾಡಲಾಯಿತು.