ಬನ್ನೂರಿನ ಸಮೀಪದ ಚಾಮನಹಳ್ಳಿ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ನೂತನ ವಿಮಾನ ಗೋಪುರ ಮತ್ತು ಕಳಸ ಪ್ರತಷ್ಠಾಪನೆ ಮತ್ತು ಬಸವಪ್ಪನವರ ಮಣಿಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಗರಾಜಾಚಾರಿ, ಎ.ಎನ್. ಸ್ವಾಮಿ, ಹಿತೇಶ್ ಸಿದ್ದಲಿಂಗರಾಜ್ ಇತರರಿದ್ದರು.
ಬನ್ನೂರು: ಪಟ್ಟಣದ ಸಮೀಪದ ಚಾಮನಹಳ್ಳಿ ಗ್ರಾಮದಲ್ಲಿನ ಶ್ರೀ ಸಿದ್ದಪ್ಪಾಜಿ ದೇವಾಲಯದ ನೂತನ ವಿಮಾನ ಗೋಪುರ ಮತ್ತು ಕಳಸ ಪ್ರತಿಷ್ಠಾಪನೆ ಮತ್ತು ಬಸವಪ್ಪನವರ ಮಣಿಧಾರಣೆ ಕಾರ್ಯಕ್ರಮ ಮಂಗಳವಾರ ಜರುಗಿತು.
ದೇವಾಲಯವನ್ನು ತಳಿರು ತೋರಣದಿಂದ ಅಲಂಕಾರ ಮಾಡಿ, ಪ್ರಾತಃ ಕಾಲದಲ್ಲಿ ಅರ್ಚಕ ಹಿತೇಶ್ ಸಿದ್ದಲಿಂಗರಾಜ್ ಅರಸ್ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹಾವಾಚನ, ನವಗ್ರಹ ಹೋಮ, ಕಳಸ ಪ್ರತಿಷ್ಠಾಪನೆ, ವಾಸ್ತು ರಾಕ್ಷೋಘ್ನ ಹೋಮ, ಮೃತ್ಯುಂಜಯ ಹೋಮ, ಅಷ್ಟದಿಕ್ಪಾಲಕ ಹೋಮ, ಬಲಿಪ್ರಧಾನ, ಪ್ರತಿಷ್ಠಾಂಗಹೋಮ, ದುರ್ಗಾಹೋಮ, ಪೂರ್ಣಾಹುತಿ, ಕಳಸ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಕುಂಭಾಭೀಷೇಕ ನಡೆಯಿತು.
ಗೋಪುರ ಪ್ರತಿಷ್ಠಾಪನೆ ಅಂಗವಾಗಿ ಆದಿಹೊನ್ನನಾಯಕನಹಳ್ಳಿ ಮಂಟೇಸ್ವಾಮಿ ಬಸವ, ದೇಶವಳ್ಳಿ ಸಿದ್ದಪ್ಪಾಜಿ ಬಸವ, ಮಂಚೇಗೌಡನಕೊಪ್ಪಲು ಸಿದ್ದಪ್ಪಾಜಿ ಕಂಡಾಯ, ಚನ್ನಪಟ್ಟಣ ಸಿದ್ದಪ್ಪಾಜಿ ಕಂಡಾಯ ದೇವಾಲಯಕ್ಕೆ ಆಗಮಿಸಿ, ಹೂ ಹೊಂಬಾಳೆ ಪೂಜೆ, ಮಾರಮ್ಮ ತಾಯಿ ಪೂಜೆ ನಡೆಸಿ ಬಸವನಿಗೆ ಮಣಿದಾರಣೆ ನಡೆಸಲಾಯಿತು. ನಂತರ ಸಿದ್ದಿನಾಮ ಯೋಗದಲ್ಲಿ ವಿಮಾನ ಗೋಪುರ ಪ್ರತಿಷ್ಠಾಪನೆ ನಡೆಯಿತು. ನಂತರ ಬಂದಂತ ಎಲ್ಲಾ ಭಕ್ತರು ದೇವರ ದರ್ಶನ ಪಡೆದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖಂಡರಾದ ಎ.ಎನ್. ಸ್ವಾಮಿ, ಹಿತೇಶ್ ಸಿದ್ದಲಿಂಗರಾಜ್ ಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.