ಜಾನುವಾರು ರಕ್ಷಣೆ  
ಮೈಸೂರು

ಜಾನುವಾರು ರಕ್ಷಣೆ

ಮೈಸೂರು: ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ 2 ಜಾನುವಾರುಗಳನ್ನು ಮಂಡಿ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಎಎಸ್‌ಐ ಆರ್. ಪುಟ್ಟರಾಜು ಹಾಗೂ ಸಿಬ್ಬಂದಿ ನಗರದ ರೈಲ್ವೆ ನಿಲ್ದಾಣದ ಬಳಿ ಗಸ್ತು ತಿರುಗುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ 2 ಜಾನುವಾರುಗಳನ್ನು ತುಂಬಿದ ಗೂಡ್ಸ್ ವಾಹನ ಹಾದು ಹೋಗಿದ್ದು, ವಾಹನವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದ ಮುಖ್ಯ ರಸ್ತೆಯ ಬಳಿ ತಡೆದು ಪರಿಶೀಲನೆ ನಡೆಸಿದಾಗ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಣೆ ಮಾಡುತ್ತಿರುವುದು ತಿಳಿದು ಬಂತು.
ಹುಣಸೂರು ತಾಲೂಕಿನ ನಂಜಾಪುರ ನಿವಾಸಿ ರಾಜ್ ಕುಮಾರ್ ಎಂಬಾತ ಉದಯಗಿರಿಯ ತೌಸಿಫ್‌ನ ಸೂಚನೆ ಮೇರೆಗೆ ಶಾಬು ಎಂಬಾತನಿಂದ ಜಾನುವಾರುಗಳನ್ನು ಪಡೆದು ಸಾಗಣೆ ಮಾಡುತ್ತಿದ್ದ. ಈ ಜಾನುವಾರುಗಳನ್ನು ತೌಸಿಫ್ ಸೂಚನೆಯ ಮೇರೆಗೆ ಉದಯಗಿರಿಯ ಅರ್ಬಾಜ್ ಅಲಿಯಾಸ್ ಅಡ್ಡು ಎಂಬಾತನ ಬಳಿಗೆ ಸಾಗಣೆ ಮಾಡಲಾಗುತ್ತಿತ್ತು. ಈ ನಾಲ್ವರು ಹಾಗೂ ಇತರರ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.