ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರಿನಲ್ಲಿ ಜೂ.11 ರಿಂದ ಗಾಲ್ಫ್ ಪಂದ್ಯಾವಳಿ

ಸದೇಶ್ ಕಾರ್ಮಾಡ್
ಮೈಸೂರು: ನಗರದ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ವತಿಯಿಂದ ಜೂ.11ರಿಂದ 13ರವರೆಗೆ ಹೀರೋ ವುಮೆನ್ಸ್ ಇಂಡಿಯನ್ ಓಪನ್ ಗಾಲ್ಫ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳಿಂದ 51 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಒಟ್ಟು 17 ಲಕ್ಷ ರೂ. ಮೊತ್ತದ ವಿವಿಧ ಬಹುಮಾನಗಳನ್ನು ನೀಡಲಾಗುವುದು. ಈ ಪಂದ್ಯಾವಳಿಯು 2007ರಲ್ಲಿ ಪ್ರಾರಂಭಗೊಂಡಿತು. ಪ್ರಸ್ತುತ 18ನೇ ಆವೃತ್ತಿಯ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ 131 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಪ್ರಕೃತಿಯ ಸೊಬಗಿನ ಮಧ್ಯೆ ನೆಲೆಗೊಂಡಿ ರುವ 18-ಹೋಲ್ ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸ್‌ಅನ್ನು ಹೊಂದಿದೆ. ಚಾಮುಂಡಿ ಬೆಟ್ಟಗಳ ಅದ್ಭುತ ನೋಟವನ್ನು ಹೊಂದಿರುವ ಈ ಮೈದಾನವು ಮೈಸೂರಿನ ಅತ್ಯಂತ ಪ್ರಸಿದ ಕ್ರೀಡಾ ತಾಣಗಳಲ್ಲಿ ಒಂದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೀರೋ ಚೀಫ್ ಆಪರೇಟಿಂಗ್ ಆಫೀಸರ್ ವಿವೇಕ್ ಶರ್ಮ, ಪಂದ್ಯಾವಳಿ ನಿರ್ದೇಶಕ ಚಂದ್ರಶೇಖರ್ ಕಿಣಿ, ಆಟಗಾರ್ತಿಯರಾದ ರಿದಿಮಾ, ಟ್ವೆಸಾ, ವಾಣಿ ಕಪೂರ್, ಪ್ರಣವಿ ಅರಸ್ ಇದ್ದರು.