ಅಪರಾಧ 
ಮೈಸೂರು

ಚಿನ್ನದಂಗಡಿಯ ಮಾಲೀಕನ ಬಂಧನ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ವಿಜಯನಗರದ ತ್ರಿನೇತ್ರ ವೃತ್ತದ ಹತ್ತಿರದ ಸ್ಟಾರ್ ಗೋಲ್ಡ್ ಕಂಪನಿ ಹೆಸರಿನ ಚಿನ್ನದಂಗಡಿ ಮಾಲೀಕ ಯೋಗೇಶ್ ಬಂಧಿತ ಆರೋಪಿ.
  • ನ್ಯಾಯಾಂಗ ಬಂಧನಕ್ಕೆ ಒಪ್ಪಿಗೆ
  • ಆರೋಪಿ ಚಿನ್ನದಂಗಡಿ ತೆರೆದು ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಹೆಚ್ಚಿನ ಸಾಲ ಕೊಡುವುದಾಗಿ ಭರವಸೆ ಕೊಟ್ಟಿದ್ದ. ಇ
ಮೈಸೂರು: ಗಿರವಿ ಇಟ್ಟುಕೊಂಡಿರುವ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಚಿನ್ನದಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ.
ವಿಜಯನಗರದ ತ್ರಿನೇತ್ರ ವೃತ್ತದ ಹತ್ತಿರದ ಸ್ಟಾರ್ ಗೋಲ್ಡ್ ಕಂಪನಿ ಹೆಸರಿನ ಚಿನ್ನದಂಗಡಿ ಮಾಲೀಕ ಯೋಗೇಶ್ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಚಿನ್ನದಂಗಡಿ ತೆರೆದು ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಹೆಚ್ಚಿನ ಸಾಲ ಕೊಡುವುದಾಗಿ ಭರವಸೆ ಕೊಟ್ಟಿದ್ದ. ಇದನ್ನು ನಂಬಿದ ಗ್ರಾಹಕರು, ಚಿನ್ನವನ್ನು ಗಿರವಿ ಇಟ್ಟಿದ್ದರು. 
ಇದನ್ನು ಅಕ್ರಮವಾಗಿ ತನ್ನ ಲಾಭಕ್ಕಾಗಿ ಗ್ರಾಹಕರ ಗಮನಕ್ಕೆ ತರದೇ ಕರಗಿಸಿದ್ದ. ಜತೆಗೆ, ಅದನ್ನು ಮಾರಾಟ ಮಾಡಿ ಸುಮಾರು 15 ಜನರಿಗೆ ಮೋಸ ಮಾಡಿ ಸುಮಾರು 1.5 ಕೋಟಿ ರೂ. ಮೌಲ್ಯದ 850 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದ.
ಮೋಸಕ್ಕೆ ಒಳಗಾದ ಗ್ರಾಹಕರು ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿ ಪತ್ತೆಗೆ ಶೋಧ ನಡೆಸಿದ್ದರು. ಕೊನೆಗೂ ಶುಕ್ರವಾರ ವಿಜಯನಗರದ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.