ಕಾಂಚಿಪುರಂನ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ಶಾಸ್ತ್ರೋತ್ಸವದಲ್ಲಿ ಚಿನ್ನ ಮತ್ತು ಕಂಚಿನ ಪದಕ ಸಹಿತ ನಗದು ಬಹುವಾನ ವಿಜೇತರಾದ ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠದ ಡಿ.ಪ್ರಣವಾಚಾರ್ಯ, ತ್ರಿವಿಕ್ರಮ ಮತ್ತು ಮಹೀಧರ.
- ತಮಿಳುನಾಡಿನ ಕಾಂಚಿಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
- ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನೇತೃತ್ವ
- ವಿದ್ಯಾರ್ಥಿಗಳನ್ನು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ.ಮಧುಸೂದನಾಚಾರ್ಯ ಅಭಿನಂದಿಸಿದರು.
ಮೈಸೂರು: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ತಮಿಳುನಾಡಿನ ಕಾಂಚಿಪುರಂನ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ಶಾಸ್ತ್ರೋತ್ಸವದಲ್ಲಿ ಮೈಸೂರಿನ ಶ್ರೀ ಸೋಸಲೆ ವ್ಯಾಸರಾಜರ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ತಮ್ಮ ಪಾಂಡಿತ್ಯ ಪ್ರದರ್ಶಿಸಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಶಾಸ್ತ್ರಾಧ್ಯಯನದ ಗಾಢತೆ ಹಾಗೂ ಕಂಠಸ್ಥ ಪಾಂಡಿತ್ಯವನ್ನು ಪರೀಕ್ಷಿಸುವ ಶಾಲಾಕಾ ಪಠಣ ಮತ್ತು ಶಾಸ್ತ್ರೀಯ ಭಾಷಣ ವಿಭಾಗದ ನ್ಯಾಯಾಮೃತ ಹಾಗೂ ಅದ್ವೈತ ಸಿದ್ಧಿ ಶಾಲಾಕಾದಲ್ಲಿ ಡಿ.ಪ್ರಣವಾಚಾರ್ಯ ಪ್ರಥಮ, ಚಂಪೂ ರಾವಾಯಣ ಕಾವ್ಯ ಶಾಲಾಕಾದಲ್ಲಿ ತ್ರಿವಿಕ್ರಮ ಪ್ರಥಮ (ಇಬ್ಬರಿಗೂ ಚಿನ್ನದ ಪದಕ ಸಹಿತ ತಲಾ 25 ಸಾವಿರ ರೂ. ನಗದು) ಮತ್ತು ವೇದಭಾಷ್ಯ ಭಾಷಣದಲ್ಲಿ ಮಹೀಧರ ತೃತೀಯ (ಕಂಚಿನ ಪದಕ ಮತ್ತು 8 ಸಾವಿರ ರೂ.ನಗದು) ಬಹುವಾನದೊಂದಿಗೆ ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಗಳಿಸಿದ್ದಾರೆ.
600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು:
ದೇಶದ ವಿವಿಧ ಸಂಸ್ಕೃತ ವಿದ್ಯಾಪೀಠಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ವಿಜೇತರಿಗೆ ಗೌರವ ಪ್ರದಾನ ವಾಡಿದ ಶ್ರೀ ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಪಾರಂಪರಿಕ ಭಾರತೀಯ ಶಾಸ್ತ್ರ ಪರಂಪರೆಯ ವೈಭವವನ್ನು ದೇಶವ್ಯಾಪಿ ಪ್ರತಿಪಾದಿಸುವ ಉದ್ದೇಶದಿಂದ ಆಯೋಜಿಸಲಾದ ಶಾಸ್ತ್ರೋತ್ಸವದಲ್ಲಿ ಶ್ರೀ ವ್ಯಾಸರಾಜರ ಮಹೋನ್ನತ ಜ್ಞಾನ ಪರಂಪರೆಯನ್ನು ಮುಂದುವರಿಸಿದ ವಿದ್ಯಾರ್ಥಿಗಳು ಇನ್ನಷ್ಟು ಮೈಲಿಗಲ್ಲು ಸಾಧಿಸಲಿ ಎಂದು ಹಾರೈಸಿದರು.
ವೇದಾಂತ, ನ್ಯಾಯ ಹಾಗೂ ಸಂಸ್ಕೃತ ಸಾಹಿತ್ಯದಂತಹ ಮಹತ್ತರ ಶಾಸ್ತ್ರ ಶಾಖೆಗಳಲ್ಲಿ ಯುವ ಪಂಡಿತರನ್ನು ರೂಪಿಸುವ ಮಹತ್ತರ ಸೇವೆಯನ್ನು ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠವು ವಾಡುತ್ತಿರುವುದು ಶ್ಲಾನೀಯ ಎಂದರು.
ಮೈಸೂರಿಗೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟ ವಿದ್ಯಾರ್ಥಿಗಳನ್ನು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ.ಮಧುಸೂದನಾಚಾರ್ಯ ಅಭಿನಂದಿಸಿದರು.