Gold bangles  
ಮೈಸೂರು

4.50 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಕಳವು

ಚಿನ್ನಾಭರಣ ಖರೀದಿಯ ನೆಪದಲ್ಲಿ ಬಂದ ಖದೀಮರಿಬ್ಬರು ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿಯ ಭೀಮಾ ಜ್ಯುವೆಲರ್ಸ್ ಮಳಿಗೆಗೆಯಲ್ಲಿ 4.50 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಇತ್ತೀಚೆಗೆ ಅಂಗಡಿಗೆ ಬಂದ ಇಬ್ಬರು, ಶೋಕೇಸ್‌ನಲ್ಲಿ ಇಡಲಾಗಿದ್ದ ಆಭರಣಗಳನ್ನು ತೆಗೆಸಿ ನೋಡಿದ್ದಾರೆ. ಕೆಲ ಹೊತ್ತಿನ ನಂತರ ಆಭರಣ ಖರೀದಿಸದೆ ಅವರು ವಾಪಸ್ ತೆರಳಿದ್ದಾರೆ. ಅವರು ತೆರಳಿದ ನಂತರ ಅಲ್ಲಿನ ಸಿಬ್ಬಂದಿಗೆ ಎರಡು ಚಿನ್ನದ ಬಳೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.