ನಂಜನಗೂಡು ತಾಲೂಕು ವಾಲ್ಮೀಕಿ ಭವನದಲ್ಲಿ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಪರಿಕರಗಳನ್ನು ವಿತರಿಸಿದರು. ಕೆ ಮಾರುತಿ, ದೊರೆಸ್ವಾಮಿ ನಾಯಕ ಸೇರಿದಂತೆ ಇತರರಿದ್ದರು.
- ಶಾಸಕ ದರ್ಶನ್ ಧ್ರುವನಾರಾಯಣ್ ಸಲಹೆ
ನಂಜನಗೂಡು: ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಸಮುದಾಯದ ಜನರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ದರ್ಶನ್ ಧ್ರುವನಾರಾಯಣ್ ಸಲಹೆ ನೀಡಿದರು.
ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಮೋಟಾರ್ ಕೇಬಲ್, ಪೈಪ್‌ಗಳು ಸೇರಿದಂತೆ ಹಲವು ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಸುಮಾರು 32 ಫಲಾನುಭವಿಗಳಿಗೆ 64 ಲಕ್ಷ ರೂ. ವೆಚ್ಚದಲ್ಲಿ ಪರಿಕರಗಳನ್ನು ವಿತರಿಸಲಾಗುತ್ತದೆ. ವಿದ್ಯುತ್ ಸಂಬಂಧಿತ ಪರಿಕರಗಳ ಸಮಸ್ಯೆ ಇದ್ದರೆ, ತಕ್ಷಣವೇ ನನಗೆ ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ. ಮಾರುತಿ, ನಾಯಕರ ಸಮಾಜದ ಅಧ್ಯಕ್ಷ ನಾಗರಾಜು, ದೊರೆಸ್ವಾಮಿ ನಾಯಕ, ಜಯರಾಮ್, ಶಿವಕುಮಾರ್, ನಾಗೇಶ್ ನಾಯಕ, ಹೆಡತಲೆ ಮಹೇಶ್, ಮಹದೇವಸ್ವಾಮಿ, ಕುಮಾರ್, ನಾಗೇಶ್, ಅಧಿಕಾರಿಗಳಾದ ನವ್ಯಶ್ರೀ, ಶಿವಕುಮಾರ್ ಇತರರು ಹಾಜರಿದ್ದರು.