ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಮುದಾಯ ಶಿಬಿರ ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಬಾಲಕೃಷ್ಣ ಮಾತನಾಡಿದರು. ವಕೀಲೆ ಪವಿತ್ರ, ಮುಖಂಡ ಶ್ರೀಕಂಠ ಇತರರಿದ್ದಾರೆ.  
ಮೈಸೂರು

ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳ ಆಸಕ್ತಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಅಧಿಕಾರಿ ಬಾಲಕೃಷ್ಣ ಸಲಹೆ
ಹುಣಸೂರು: ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ನಿವೃತ್ತ ಅಧಿಕಾರಿ ಬಾಲಕೃಷ್ಣ ಸಲಹೆ ನೀಡಿದರು.
ನಗರದ ಡೀಡ್ ಸಂಸ್ಥೆಯಲ್ಲಿ ಮೂಡುಬಿದರೆ ಆಳ್ವಾಸ್ ಕಾಲೇಜು(ಸ್ವಾಯುತ್ತ) ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ವಿಭಾಗದ ವತಿಯಿಂದ ಆಯೋಜಿಸಿರುವ ಸಮುದಾಯ ಶಿಬಿರ 2025-26 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಎಲ್ಲ ಸಮುದಾಯದ ಶ್ರೇಯೋಭಿವೃದ್ಧಿ ಸಮಾಜ ಕಾರ್ಯ ವಿದ್ಯಾರ್ಥಿಗಳ ಮನೋಧರ್ಮವಾಗಬೇಕು. ನಿಮ್ಮ ಅಧ್ಯಯನ ದಿನಗಳಲ್ಲೇ ಈ ಕುರಿತಾದ ಆಲೋಚನೆ ನಿಮ್ಮ ಮನದಲ್ಲಿ ಮೂಡಬೇಕು. ಸಮಾಜದ ಪ್ರತಿಯೊಂದ ಸಮುದಾಯದಲ್ಲೂ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಅದರ ಪರಿಹಾರದ ದಾರಿ ನಿಮ್ಮಿಂದ ಸಿಗಬೇಕಿದೆ ಎಂದು ತಿಳಿಸಿದರು.
ಜನರನ್ನು ಜಾಗೃತಗೊಳಿಸುವ, ಪ್ರಶ್ನಿಸುವ ಮನೋಭಾವ ರೂಪಿಸುವ ಕಾರ್ಯ ನಿಮ್ಮಿಂದ ಆಗಬೇಕು ಎಂದರು.
ರತ್ನಪುರಿ ಲಯನಾ ಸಂಸ್ಥೆಯ ಶರಣ್ಯ ಹಾವುಗಳ ರಕ್ಷಣೆ, ಹಾವುಗಳ ಕಡಿತದಿಂದ ಪಾರಾಗುವ ಬಗೆ ಕುರಿತು ಮಾಹಿತಿ ನೀಡಿದರು.
ತಾಲೂಕಿನ ಮರದೂರು ಗ್ರಾಮದ ದುಸ್ತಿತಿಯಲ್ಲಿರುವ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ದೇಗುಲಕ್ಕೆ ಸಮುದಾ ಶಿಬಿರದ ಶಿಬಿರಾರ್ಥಿಗಳು ಭೇಟಿ ನೀಡಿದರು. ಗ್ರಾಮದ ನಾಯಕ ಸಮಾಜದ ಮಹಿಳೆಯರ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು. ವಕೀಲೆ ಪವಿತ್ರ, ಡೀಡ್ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಮರದೂರು ಶ್ರೀಕಂಠ, ಪ್ರಾಧ್ಯಾಪಕರಾದ ಡಾ.ಮಧುಮಾಲಿನಿ, ಡೀಡ್ ಶ್ರೀಕಾಂತ್ ಪ್ರಾಧ್ಯಪಕರಾದ ಡಾ.ಕೆ.ಮಧುಮಾಲಾ, ನಯೋಮಿ ರಿಯೋನಾ ಮೋರೆಸ್, ಶಾರದಾ ವಳಗೆರೆ ಇತರರು ಉಪಸ್ಥಿತರಿದ್ದರು.