ಗೆರಸನಹಳ್ಳಿಯಲ್ಲಿ ಆಯೋಜಿಸಿದ್ದ ಗೆರಸನಹಳ್ಳಿ ಪ್ರೀಮಿಯರ್ ಲೀಗ್ 2 ಪಂದ್ಯಾವಳಿಯಲ್ಲಿ ಗೆರಸನಹಳ್ಳಿ ಈಗಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ನಾಯಕ ಮಾಂತೇಶ್, ಉಪನಾಯಕ ಮೋಹನ್, ಶಶಿ, ರಾಜೇಂದ್ರ, ಮನೋಜ್ ಇದ್ದರು.
- ಗೆರಸನಹಳ್ಳಿಯ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ
- ಕುಂಬಾರಕೊಪ್ಪಲಮ್ಮ ಜಾತ್ರಾ ಮಹೋತ್ಸವ
- ಗೆರಸನಹಳ್ಳಿ ಪ್ರೀಮಿಯರ್ ಲೀಗ್-2 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಗೆರಸನಹಳ್ಳಿಯ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಹಾಗೂ ಕುಂಬಾರಕೊಪ್ಪಲಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಗೆರಸನಹಳ್ಳಿ ಪ್ರೀಮಿಯರ್ ಲೀಗ್-2 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆರಸನಹಳ್ಳಿ ಈಗಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅಗ್ರೆಸ್ಸಿವ್ ಸ್ಟ್ರೈಕರ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿರೆ, ಕ್ಲಾಸಿಕ್ ಸ್ಟ್ರೈಕರ್ಸ್ ತಂಡ ಮೂರನೇ ಸ್ಥಾನ ಮತ್ತು ಗೆರಸನಹಳ್ಳಿ ಹಂಟರ್ಸ್‌ತಂಡ ನಾಲ್ಕನೆ ಸ್ಥಾನ ಗಳಿಸಿತು.
ವಕೀಲ ಮಾಂತೇಶ್ ಮಾತನಾಡಿ, ಗ್ರಾಮದ ಯುವಕರು ಒಂದಾಗಿ ಎಲ್ಲರ ಸಹಕಾರದೊಂದಿಗೆ ಆಯೋಜಿಸುತ್ತಿರುವ ಪಂದ್ಯಾವಳಿ ಯಶಸ್ವಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗೆರಸನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ಶಿಲ್ಪಿತ ಚಲುವರಾಜ್, ಮಾಜಿ ಸದಸ್ಯ ವೇಶಾಕ್, ಮುಖಂಡರಾದ ಮೋಹನ್, ಜಿ.ಎಂ.ಮನೋಜ್, ಶಶಿ, ರಾಜೇಂದ್ರ, ಸಂತೋಷ್, ಗಣೇಶ್ ಮತ್ತು ಆನಂದ ಹಾಜರಿದ್ದರು.