ಮೈಸೂರಿನಲ್ಲಿ 8 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ 
ಮೈಸೂರು

ಮೈಸೂರಿನಲ್ಲಿ 8 ಲಕ್ಷ ಮೌಲ್ಯದ ಗಾಂಜಾ ವಶ

ಸದೇಶ್ ಕಾರ್ಮಾಡ್
ಮೈಸೂರು: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿ ಆರೋಪಿಗಳಿಂದ 8.65 ಲಕ್ಷ ರೂ. ಮೌಲ್ಯದ 5ಕೆ.ಜಿ 320 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಸಿಸಿಬಿ ಘಟಕದ ಎಸಿಪಿ ಅವರ ಮಾಹಿತಿಯ ಮೇರೆಗೆ ಸಿಸಿಬಿ ಒಸಿಡಬ್ಲ್ಯೂ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸಿದಾಗ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ತಕ್ಷಣ ಆರೋಪಿಗಳಾದ ಅಮ್ಜದ್ ಪಾಷ, ಜಿಯಾ ಖಾನ್, ಮಹಮ್ಮದ್ ಸಕ್ಲೈನ್ ಮತ್ತು ಸೈಯದ್ ಬೇಗ್ ಎಂಬವರನ್ನು ಬಂಧಿಸಲಾಯಿತು. ಆರೋಪಿಗಳು ಗಾಂಜಾ ಸಾಗಾಟಕ್ಕೆ ಬಳಕೆ ಮಾಡಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್, ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐಗಳಾದ ಕೆ. ಲೇಪಾಕ್ಷ.ಕೆ, ಜ್ಯೋತ್ಸ್ನಾ ರಾಜ್, ರೇವಣಸಿದ್ದಪ್ಪ. ಅನಿಲ್, ಸಿಬ್ಬಂದಿ ಸಮೀರ್, ರಾಜಾಸಾಬ್, ಚೇತನ್, ಆದಂ, ಮಧುಕುಮಾರ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಯಶ್ವಂತ್, ದೇವರಾಜು, ಮಮತ, ಸಿದ್ದರಾಜು ಹಾಗೂ ಸುರೇಶ್ ಪಾಲ್ಗೊಂಡಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.