ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರನ್ನು ಅಭಿನಂದಿಸಲಾಯಿತು. ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್, ಸತೀಶ್, ಶಂಕರೇಗೌಡ,ರವಿ, ಪುಟ್ಟಮಾದೇಗೌಡ, ಪ್ರಕಾಶ, ಕಮಲಮ್ಮ, ಹೇಮೇಶ್, ಯೋಗೇಶ್, ಪುಟ್ಟಸ್ವಾಮಯ್ಯ, ಮುಕುಂದ, ಗಣೇಶನಾಯಕ ಇತರರಿದ್ದರು.
- ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್ ಮಾಹಿತಿ
- ಗುಣಮಟ್ಟದ ಹಾಲು ಪೂರೈಸಲು ಮನವಿ
ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ (ಮೈಮುಲ್) ದೊರೆಯುವ ಸಲಹೆ, ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಉತ್ಪಾದಕರು ಪ್ರತಿವರ್ಷ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೈನುಗಾರಿಕೆಯಿಂದ ಉತ್ತಮ ಆದಾಯಗಳಿಸಬಹುದು ಎಂದರು.
ಸಂಘವು ಪ್ರಸಕ್ತ ಸಾಲಿನಲ್ಲಿ 2.85 ಲಕ್ಷ ರೂ. ನಿವ್ವಳ ಲಾಭಗಳಿಸಿರುವುದು ಸಂತಸದ ವಿಚಾರ. ಇದೇ ರೀತಿ ಮುಂದೆಯೂ ಹಾಲು ಉತ್ಪಾದಕರು ಸಹಕಾರ ನೀಡುವುದರೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ನೀಡಿ, ಸನ್ಮಾನಿಸಲಾಯಿತು.
ಮೈಮುಲ್ ವಿಸ್ತರಣಾಧಿಕಾರಿ ಸತೀಶ್, ಸಂಘದ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷ ರವಿ, ನಿರ್ದೇಶಕರಾದ ಪುಟ್ಟಮಾದೇಗೌಡ, ಪ್ರಕಾಶ, ಕಮಲಮ್ಮ, ಹೇಮೇಶ್, ಯೋಗೇಶ್, ಪುಟ್ಟಸ್ವಾಮಯ್ಯ, ಮುಕುಂದ, ಗಣೇಶನಾಯಕ, ಸುಂದ್ರಮ್ಮ, ಕಾರ್ಯದರ್ಶಿ ಮಹದೇವ, ಸಿಬ್ಬಂದಿ ಮಂಜೇಗೌಡ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.