ಎಚ್.ಡಿ.ಕುಮಾರಸ್ವಾಮಿ 
ಮೈಸೂರು

ಜಿ.ಟಿ.ದೇವೇಗೌಡ ಮುಗಿದು ಹೋದ ಕತೆ: ಎಚ್.ಡಿ.ಕುಮಾರಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಟಿಡಿ ಒಂದು ಕಾಲಲ್ಲ, ಎರಡು ಕಾಲನ್ನು ಹೊರಗಡೆ ಇಟ್ಟಿದ್ದಾರೆ
  • ಜಿ.ಟಿ. ದೇವೇಗೌಡರು ಯಾವ್ಯಾವಾಗ ಯಾವ ರೀತಿಯ ಆಟವಾಡಿದ್ದಾರೆ ಎಂಬುದು ಗೊತ್ತಿದೆ.
ಮೈಸೂರು: ಜೆಡಿಎಸ್‌ನೊಂದಿಗೆ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಸಿಡಿಮಿಡಿಗೊಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ,  ಜಿಟಿಡಿ ಹೆಸರನ್ನು ನನ್ನ ಮುಂದೆ ಪ್ರಸ್ತಾಪಿಸ ಬೇಡಿ. ಅದೆಲ್ಲ ಮುಗಿದು ಹೋದ ಕತೆ. ಅವರು ಒಂದು ಕಾಲಲ್ಲ, ಎರಡು ಕಾಲನ್ನು ಹೊರಗಡೆ ಇಟ್ಟಿದ್ದಾರೆ ಎಂದು ಕುಟುಕಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು
ಜಿಡಿಟಿ ಬಗ್ಗೆ ನಾನು ಈ ಹಿಂದೆ ಏನು ಹೇಳಿದೆನೋ ಅದೇ ಅಂತಿಮ. ಈ ವಿಚಾರದಲ್ಲಿ ನನ್ನ ನಿಲುವು ಬಹಳಷ್ಟ ಸ್ಪಷ್ಟವಾಗಿದೆ. ದೊಡ್ಡ ಗೌಡರು(ಎಚ್.ಡಿ.ದೇವೇಗೌಡರು) ಹೇಳಿದರೂ ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ನಿಲುವು ಬದಲಿಸುವುದಿಲ್ಲ. ಈ ಬಾರಿಯ ಟಿಕೆಟ್ ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲವೂ ಬೇಡ ಎಂದು ಸ್ಪಷ್ಟಪಡಿಸಿದರು.
ಜಿ.ಟಿ. ದೇವೇಗೌಡರು ಯಾವ್ಯಾವಾಗ ಯಾವ ರೀತಿಯ ಆಟವಾಡಿದ್ದಾರೆ ಎಂಬುದು ಗೊತ್ತಿದೆ. ಅವರ ಎಲ್ಲ ಪೂರ್ವಪರವೂ ತಿಳಿದಿದೆ. ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದು, ಅವರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ ಎಂದರು
ದೊಡ್ಡಗೌಡರಿಗೆ ಜಿಟಿಡಿ ಮೇಲೆ ಪ್ರೀತಿ, ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಜಿಟಿಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡಲ್ಲ ಎಂದೂ ಹೇಳಿದರು.