ಮುತ್ತಿನ ಮುಳಸೋಗೆ ಅಂಗನವಾಡಿ ಕೇಂದ್ರಕ್ಕೆ ಎಲ್.ಅನುಪಮಾ ಚೇರ್ ಮತ್ತು ಟೇಬಲ್ ವಿತರಿಸಿದರು. ಎಂ.ಬಿ.ಶಿವಕುಮಾರ್, ಚಂದ್ರ ನಾಯಕ, ಪುಟ್ಟ ಜಯಮ್ಮ, ಶಿವಕುಮಾರ್ ಇದ್ದರು.  
ಮೈಸೂರು

ಮೂಲ ಸೌಕರ್ಯದಿಂದ ಶೈಕ್ಷಣಿಕ ಬೆಳವಣೆಗೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷೆ ಎಲ್.ಅನುಪಮಾ ಹೇಳಿಕೆ
ಬೈಲುಕುಪ್ಪೆ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತ ಮೂಲ ಸೌಕರ್ಯಗಳು ದೊರೆತರೇ ಶೈಕ್ಷಣಿಕವಾಗಿ ಉತ್ತಮ ಬೆಳೆವಣಿಗೆಯಾಗಲಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಉಪಾಧ್ಯಕ್ಷೆ ಎಲ್. ಅನುಪಮಾ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಅವರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುತ್ತಿನಮುಳಸೋಗೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ವೈಯಕ್ತಿಕವಾಗಿ ಚೇರ್ ಹಾಗೂ ಟೇಬಲ್‌ಗಳನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ಪುಟಾಣಿ ಮಕ್ಕಳಿಗೆ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳು ಪಾಲಕರ ಮನೆಯಂತೆ ವಾತಾವರಣ ನಿರ್ಮಿಸುವ ಮೂಲಕ ಅವರಿಗೆ ಪ್ರಾಥಮಿಕ ಹಂತದ ಎಲ್ಲ ಬೆಳವಣಿಗೆ ಹಾಗೂ ಸಲಹೆಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದರು.
ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಮಕ್ಕಳ ಅನುಕೂಲಕರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಶು ಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್ ಅವರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವ ಮೂಲಕ, ತಾಲೂಕಿಗೆ ಹಲವು ಶಾಶ್ವತ ಯೋಜನೆಗಳನ್ನು ನೀಡಿದ್ದಾರೆ. ಇದರಿಂದ ತಾಲೂಕಿನ ಬಹುತೇಕ ರೈತಪಿ ವರ್ಗದವರು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಸಹಕಾರವಾಗಿದೆ ಎಂದರು.
ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಉಪಾಧ್ಯಕ್ಷೆ ಎಲ್. ಅನುಪಮಾ 18 ಟೇಬಲ್ 18 ಚೇರ್ ವಿತರಣೆ ಮಾಡಿದರು. ಮುಖಂಡರಾದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರನಾಯಕ, ಮುಖಂಡರಾದ ಪುಟ್ಟ ಸೋಮಪ್ಪ.ಮುಖ್ಯಶಿಕ್ಷಕ ಶಿವುಕುಮಾರ್, ಮುಖಂಡರಾದ ಶ್ರೀನಿವಾಸ, ವೀರಭದ್ರ ಶೆಟ್ಟಿ, ಶಿಕ್ಷಕರಾದ ಪುಷ್ಪಲತಾ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪುಟ್ಟ ಜಯಮ್ಮ, ಗಣೇಶ, ಸ್ವಾಮಿ ನಾಯ್ಕ, ಅಂಗನವಾಡಿ ಶಿಕ್ಷಕರು ಪಾಲಕರು ಇದ್ದರು.