ಮಳೆಗಾಗಿ ಪ್ರಾರ್ಥಿಸಿ ಕಂಪಲಾಪುರ ಕೊಪ್ಪಲಿನಲ್ಲಿ ಸೋಮವಾರ ಕಪ್ಪೆ (ಅಟ್ಟುಗುಣಿ) ಹಬ್ಬ ಆಚರಿಸಲಾಯಿತು. 
ಮೈಸೂರು

ಮಳೆಗಾಗಿ ಕಂಪಲಾಪುರ ಕೊಪ್ಪಲಿನಲ್ಲಿ ಕಪ್ಪೆ ಹಬ್ಬ

ಕಂಪಲಾಪುರ: ಮಳೆಗಾಗಿ ಪ್ರಾರ್ಥಿಸಿ ಕಂಪಲಾಪುರ ಕೊಪ್ಪಲಿನಲ್ಲಿ ಸೋಮವಾರ ಕಪ್ಪೆ (ಅಟ್ಟುಗುಣಿ) ಹಬ್ಬ ಆಚರಿಸಲಾಯಿತು.
ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ದವಸ-ಧಾನ್ಯ ಸಂಗ್ರಹಿಸಿ ಗ್ರಾಮದ ಹೊರವಲಯದ ಅರಳಿ ಮರದ ಕೆಳಗಡೆ ಚಪ್ಪರ ಹಾಕಿ ಪೂಜೆ ಸಲ್ಲಿಸಿದರು. ಅಲ್ಲೇ ಅಡುಗೆ ಮಾಡಿ ಗ್ರಾಮಸ್ಥರೆಲ್ಲ ಸೇರಿ ಊಟ ಮಾಡಿದರು. ನಂತರ ಕಪ್ಪೆಯನ್ನು ಒನಕೆ ಮಧ್ಯಭಾಗಕ್ಕೆ ಕಟ್ಟಿ, ಅದನ್ನು ಪುಟ್ಟ ಬಾಲಕರ ಮೇಲೆ ಹೊರಿಸಿ ತಮಟೆ ವಾದ್ಯದೊಂದಿಗೆ ಕೊಪ್ಪಲು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಜೆ ಮೆರವಣಿಗೆ ಮಾಡಲಾಯಿತು.
ಕೊಪ್ಪಲಿನ ಮಾದೇಶ್ವರ ಸ್ವಾಮಿ ದೇವಸ್ಥಾನದ ಬಸವಣ್ಣನನ್ನು ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರೆಲ್ಲ ಒನಕ್ಕೆ ಹೊತ್ತ ಬಾಲಕರಿಗೆ ಹಾಗೂ ಕಪ್ಪೆಗೆ ನೀರನ್ನು ಹಾಕಿ ಪೂಜೆ ಸಲ್ಲಿಸುತ್ತಾರೆ.