ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ದೇವರಾಜ್ ಮಾತನಾಡಿದರು. ಡಾ.ಮಧು, ಡಾ.ಜ್ಯೋತಿ, ಕೃಷ್ಣ, ಡಿ.ಆರ್.ಪುಟ್ಟಸ್ವಾಮಿ ಯಡದೊರೆ, ಧನಲಕ್ಷ್ಮಿ, ಶಂಕರನಾರಾಯಣ್ ಇತರರು ಇದ್ದರು. 
ಮೈಸೂರು

ಕ್ಷಯ ರೋಗದ ಲಕ್ಷಣಗಳಿರುವವರಿಗೆ ಉಚಿತ ಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿ ಡಾ.ದೇವರಾಜ್ ಹೇಳಿಕೆ
ತಿ.ನರಸೀಪುರ: ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೂರು ದಿನಗಳ ಅಭಿಯಾನದ ಕಾರ್ಯಕ್ರಮವಾಗಿ ತಲಕಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ದೇವರಾಜ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ.ದೇವರಾಜ್, ತಲಕಾಡು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗುಣಮುಖರಾಗಿದ್ದರೂ ಗುಣ ಲಕ್ಷಣಗಳಿರುವ ಹಿಂದಿನ ರೋಗಿಗಳನ್ನೂ ಪತ್ತೆ ಹಚ್ಚುವ ಜತೆಗೆ ಕೆಮ್ಮಿದಾಗ ರಕ್ತ ಬರುವುದು, ಊಟ ಸೇರದಿರುವುದು, ಪದೇ ಪದೇ ಜ್ವರ ಬರುವುದು, ಸಣ್ಣ ಆಗುವುದು, ಹಸಿವು ಕಾಣಿಸಿಕೊಳ್ಳದಿರುವುದು ಸೇರಿದಂತೆ ಇನ್ನೂ ಕೆಲವು ರೋಗ ಲಕ್ಷಣಗಳನ್ನು ಗುರುತಿಸಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ಮಧು, ತಜ್ಞ ವೈದ್ಯೆ ಜ್ಯೋತಿ, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣ, ರೇಡಿಯಾಲಜಿ ಆಫೀಸರ್ ಡಿ.ಆರ್.ಪುಟ್ಟಸ್ವಾಮಿ ಯಡದೊರೆ, ಧನಲಕ್ಷ್ಮೀ, ಶಂಕರನಾರಾಯಣ್, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.