ರ‌್ಯುಮಾ ಕೇರ್ ಕ್ಲಿನಿಕ್‌ 
ಮೈಸೂರು

ಲೂಪಸ್ ಕಾಯಿಲೆ ಉಚಿತ ಜಾಗೃತಿ

ಅವಿನಾಶ್ ಜೈನಹಳ್ಳಿ
ನಗರದ ಶಾರದಾದೇವಿ ನಗರದಲ್ಲಿರುವ ರ‌್ಯುಮಾ ಕೇರ್ ಕ್ಲಿನಿಕ್‌ನಲ್ಲಿ ಮೇ 26ರಂದು ಬೆಳಗ್ಗೆ 11.30ರಿಂದ ಸಂಜೆವರೆಗೆ ಲೂಪಸ್ ಕಾಯಿಲೆ ಕುರಿತು ಉಚಿತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಲಿನಿಕ್‌ನ ವೈದ್ಯ ಡಾ. ಚೆಂಗಪ್ಪ ಹೇಳಿದರು.
ದೇಶದಲ್ಲಿ ಒಂದು ಲಕ್ಷದಲ್ಲಿ ಸುಮಾರು 50 ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಬಹಳಷ್ಟು ಜನರಿಗೆ ಇದರ ಅರಿವಿರುವುದಿಲ್ಲ. ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ನಮ್ಮ ದೇಹದ ಮೇಲೆಯೇ ತಿರುಗಿ ಬಿದ್ದು, ಅನೇಕ ಅನಾರೋಗ್ಯಗಳಿಗೆ ಕಾರಣವಾಗುವ ಕಾಯಿಲೆ ಇದಾಗಿದೆ. ಕೆಲವರಿಗೆ ಕೇವಲ ಒಂದು ವಾರದಲ್ಲಿ ವಾಸಿಯಾಗುವಂತಿದ್ದರೆ, ಹಲವರಿಗೆ ಸುಮಾರು ಏಳು ವರ್ಷ ಬೇಕಾಗಬಹುದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯ ಡಾ.ರಶ್ವಿತ್ ಉಮೇಶ್ ಮಾತನಾಡಿ, ಲೂಪಸ್ ಕಾಣಿಸಿಕೊಳ್ಳಲು ನಿಖರ ಕಾರಣ ಪತ್ತೆಯಾಗಿಲ್ಲ. ಆದರೆ ಥೈರಾಯ್ಡ ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಆಗಾಗ್ಗೆ ಬರುವ ಜ್ವರ, ರಕ್ತದ ಕಣಗಳ ಕುಸಿಯುವಿಕೆ ಮೊದಲಾದವು ಲಕ್ಷಣಗಳಾಗಿವೆ. ಹೀಗಾಗಿ, ಒಮ್ಮೆ ತಪಾಸಣೆಗೊಳಗಾಗುವುದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.