ಡೆಬಿಟ್ ಕಾರ್ಡ್ (ಸಾಂದರ್ಭಿಕ ಚಿತ್ರ)
ಮೈಸೂರು: ಡೆಬಿಡ್ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ಅವರ ಖಾತೆಯಲ್ಲಿದ್ದ 2.70 ಲಕ್ಷ ರೂ.ಗಳನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಟಿ.ಕೆ. ಲೇಔಟ್ ನಿವಾಸಿ ಡಾ.ವೈ. ನಾರಾಯಣ ರಾವ್ ಎಂಬವರೇ ಹಣ ಕಳೆದುಕೊಂಡವರು. ಇತ್ತೀಚೆಗೆ ನಾರಾಯಣ ರಾವ್ ಅವರಿಗೆ ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬ ‘ನಿಮ್ಮ ಡೆಬಿಡ್ ಹೊಸ ಕಾರ್ಡ್ ಅವಧಿ ಮುಕ್ತಾಯಗೊಂಡಿದ್ದು, ಹೊಸ ಕಾರ್ಡ್ ಪಡೆಯಲು ಒಟಿಪಿ ನೀಡಿ’ ಎಂದು ಸಲಹೆ ನೀಡಿದ್ದ. ಅವರ ಸಲಹೆಯಂತೆ ಒಟಿಪಿ ನೀಡಿದ ನಂತರ ಹಂತ ಹಂತವಾಗಿ ಇವರ ಖಾತೆಯಿಂದ ಹಣ ವಂಚನಕನ ಖಾತೆಗೆ ವರ್ಗಾವಣೆಯಾಗಿದೆ. ಈ ಕುರಿತು ಮಂಗಳವಾರ ಸರಸ್ವತಿಪುರಂ ಪೊಲೀಸ್ ಠಾಣೆಗೆ ನಾರಾಯಣ ರಾವ್ ದೂರು ನೀಡಿದ್ದಾರೆ.
ಡೆಬಿಡ್ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ಅವರ ಖಾತೆಯಲ್ಲಿದ್ದ 2.70 ಲಕ್ಷ ರೂ.ಗಳನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.