police constable 
ಮೈಸೂರು

ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ವಂಚನೆ ಪ್ರಕರಣ ದಾಖಲು

ಅವಿನಾಶ್ ಜೈನಹಳ್ಳಿ
ಅಡವಿಟ್ಟ ಚಿನ್ನಾಭರಣವನ್ನು ಬಿಡಿಸಲು ಹಣ ಪಡೆದ ಪೊಲೀಸ್ ಕಾನ್‌ಸ್ಟೇಬಲ್ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಎನ್.ಆರ್.ಸಂಚಾರ ಠಾಣೆಯ ಗಸ್ತು ವಾಹನ ಚಾಲಕ, ಸಿಎಆರ್‌ನ ಕಾನ್‌ಸ್ಟೇಬಲ್ ಬಿ.ವಿ.ಮಹದೇವ ವಿರುದ್ಧ ಕಲ್ಯಾಣಗಿರಿಯ ನಿವಾಸಿಯೂ ಆದ ಉದ್ಯಮಿ ರಾಜೇಶ್ ದೂರು ನೀಡಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.