ಕೆ.ಆರ್.ನಗರದ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ಜಯಂತಿಯಂದು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ರುಖಿಯ ಬೇಗಂ, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಂಮ ಶಂಶಂಕರ್, ನಗರಾಧ್ಯಕ್ಷ ಮೋಹನ್, ಸಾಹಿತಿ ಪ್ರಭಾಕರ ಹೆಗ್ಗಂದೂರು, ಕೃಷ್ಣ, ದೀವಾಕರ್ ಇತರರು ಇದ್ದರು. 
ಮೈಸೂರು

ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ರುಖಿಯ ಬೇಗಂ ಬಣ್ಣನೆ
ಕೆ.ಆರ್.ನಗರ: ತಮ್ಮ ಆಡಳಿತಾವಧಿಯಲ್ಲಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಹಸೀಲ್ದಾರ್ ರುಖಿಯ ಬೇಗಂ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಬ್ಬ ರಾಜ ಪ್ರಜೆಗಳ ಅಭಿವೃದ್ಧಿ, ಪ್ರಜೆಗಳ ಶ್ರೇಯಸ್ಸಿಗೆ ಬೇಕಾದ ಎಲ್ಲ ರೀತಿಯ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದಲೇ ನಾವು ಇಂದಿಗೂ ಕೂಡ ಅವರನ್ನು ನೆನಪಿಸಿಕೊಳ್ಳಲು ಸಾಧ್ಯ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರು ಆಡಳಿತ ಸುಧಾರಣೆಗಾಗಿ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಿದರು. ಪ್ರಜಾ ಪ್ರಾತಿನಿಧ್ಯ ಸಭೆಗಳನ್ನು ನಡೆಸಿದರು. ವರ್ಷಕ್ಕೆರಡು ಬಾರಿ ಕಲಾಪಗಳನ್ನು ನಡೆಸುವ ಉತ್ತಮ ಆಡಳಿತಾತ್ಮಕ ದೃಷ್ಟಿಕೋನ ಹೊಂದಿದ್ದರು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಡಿಂಡಿಂಮ ಶಂಕರ್, ಸಾಹಿತಿ ಪ್ರಭಾಕರ ಹೆಗ್ಗಂದೂರು, ನಿವೃತ್ತ ಪ್ರಾಂಶುಪಾಲ ಕೃಷ್ಣ, ದಸಂಸ ವಿಭಾಗಿಯ ಕಾರ್ಯದರ್ಶಿ ದಿವಾಕರ ಮಾತನಾಡಿದರು. ಜ್ಞಾನವಿ ಕಲಾತಂಡವರು ನಾಲ್ವಡಿ ಕೃಷ್ಣರಾಜ ಒಡೆಯರ್ ಗೀತೆ ಹಾಡಿಸಿ ಗಮನ ಸೆಳೆದರು.
ರಾಜ್ಯ ರೈತ ಪರ್ವ ಸಂಘಟನೆಯ ಗೌರವಾಧ್ಯಕ್ಷ ಎಂ.ಜೆ.ಕುಮಾರ್, ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ವ್ಯಾನ್ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಕಸಾಪ ನಗರಾಧ್ಯಕ್ಷ ಮೋಹನ್, ಮುಖಂಡರಾದ ರಾಮಶೆಟ್ಟಿ, ಮಹದೇವ್, ಹೊಸಕೋಟೆ ಚೆಲುವರಾಜು, ಬೀರನಹಳ್ಳಿ ರಾಮರಾಜ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.