ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘದ ಪ್ರಥಮ ಮಹಾಸಭೆಯಲ್ಲಿ ಸಾಯಿನಾರಾಯಣ ಕಲ್ಮಡ್ಕ ಅವರನ್ನು ಗೌರವಿಸಲಾಯಿತು. ವಿದುಷಿ ಡಾ.ನಾಗಲಕ್ಷ್ಮೀ, ವಿದುಷಿ ಡಾ. ಚಿತ್ರಾ ಬಿಳಿಗಿರಿ, ವಿದುಷಿ ಎಸ್.ಗೀತಾ, ವಿದುಷಿ ಶೀಲಾ, ವಿದ್ವಾನ್ ಗುಣಶಂಕರ್, ಸಹ ಕಾರ್ಯದರ್ಶಿ ವಿದ್ವಾನ್ ರಜತ್ ಇತರರಿದ್ದರು.
- ವಿದುಷಿ ಡಾ.ನಾಗಲಕ್ಷ್ಮೀ ಅವರಿಗೆ ಮೈಸೂರು ವಿಭಾಗದ ಸಂಚಾಲಕತ್ವ
- ಸಮಿತಿ ಅಧ್ಯಕ್ಷರಾಗಿ ವಿದುಷಿ ಡಾ.ಚಿತ್ರಾ ಬಿಳಿಗಿರಿ, ಉಪಾಧ್ಯಕ್ಷರಾಗಿ ವಿದುಷಿ ಎಸ್.ಗೀತಾ ಹಾಗೂ ವಿದುಷಿ ಶೀಲಾ ಆಯ್ಕೆ
ಮೈಸೂರು:ಬೆಂಗಳೂರಿನ ಶ್ರೀಗುರುರಾಜ ಸಭಾ ಭವನದಲ್ಲಿ ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘದ ಪ್ರಥಮ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಸಾಯಿನಾರಾಯಣ ಕಲ್ಮಡ್ಕ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಿದುಷಿ ಡಾ.ನಾಗಲಕ್ಷ್ಮೀ ಅವರ ಸಂಚಾಲಕತ್ವದ ಮೈಸೂರು ವಿಭಾಗದ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಹೊಸ ಸಮಿತಿಯನ್ನು ರಚನೆ ಮಾಡಲಾಯಿತು.
ಸಮಿತಿ ಅಧ್ಯಕ್ಷರಾಗಿ ವಿದುಷಿ ಡಾ.ಚಿತ್ರಾ ಬಿಳಿಗಿರಿ, ಉಪಾಧ್ಯಕ್ಷರಾಗಿ ವಿದುಷಿ ಎಸ್.ಗೀತಾ ಹಾಗೂ ವಿದುಷಿ ಶೀಲಾ, ಕಾರ್ಯದರ್ಶಿ ವಿದ್ವಾನ್ ಗುಣಶಂಕರ್, ಸಹ ಕಾರ್ಯದರ್ಶಿ ವಿದ್ವಾನ್ ರಜತ್, ನಿರ್ದೇಶಕರಾಗಿ ವಿದುಷಿ ಮೇಘನಾ, ವಿದ್ವಾನ್ ಮಹೇಶ್, ವಿದುಷಿ ರಮ್ಯಾ ರಾಘವೇಂದ್ರ, ವಿದುಷಿ ಅದಿತಿ, ವಿದುಷಿ ಸೌಜನ್ಯಾ, ವಿದುಷಿ ಸುನಿಧಿ, ಕೆ.ಚಂದ್ರಿಕಾ, ಆಶಾರಾಣಿ ಕೆ, ಜಿ.ಎಸ್.ಶ್ರಾವಣಿ, ಶಶಿಕಲಾ ಕೆ.ಎಸ್.ಅದಿತಿ ಭಟ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೊಸ ಸಮಿತಿಯನ್ನು ರಾಷ್ಟ್ರೀಯ ಆಡಳಿತ ಮಂಡಳಿ ಅಭಿನಂದಿಸಿತು.