ಸರಗೂರು ತಾಲೂಕಿನ ನಂಜೀಪುರ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಸ್ಥಾಪನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. 
ಮೈಸೂರು

ನಂಜೀಪುರದಲ್ಲಿ ಧ್ವಜಸ್ತಂಭ ಪ್ರತಿಸ್ಥಾಪನೆ

ನಾಗೇಶ ಎಸ್
ಸರಗೂರು: ತಾಲೂಕಿನ ನಂಜೀಪುರ ಗ್ರಾಮದ ಶ್ರೀ ಮಲೈ ಮಹದೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಧ್ವಜಸ್ತಂಭ ಪ್ರತಿಸ್ಥಾಪನೆ ಅಂಗವಾಗಿ ಹೋಮ ಹವನ, ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ನಂಜೀಪುರ ಪಡುವಣ ತೀರ್ಥ ವಿರಕ್ತ ಮಠದ ಶ್ರೀ ಇಮ್ಮಡಿಚಿಲಾಳ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ವಿದ್ವಾನ್ ಶ್ರೀ ಹೇಮೇಶ್ ಚಿಲಾಳ ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಂಜೀಪುರ ವೇದನಬ್ರಹ್ಮ ದಿವಂಗತ ತೋಂಟಸ್ವಾಮೀಜಿ ಸ್ಮರಣಾರ್ಥವಾಗಿ ಅವರ ಕುಟುಂಬ ವರ್ಗ ಧ್ವಜಸ್ತಂಭ ನೀಡಿದ್ದಾರೆ. ಈ ಸಂದರ್ಭದಲ್ಲಿ ಧ್ವಜಸ್ತಂಭ, ಬಸವ, ಲಿಂಗವನ್ನು ಮೈಸೂರಿನ ವಿ.ಪರಮೇಶ್ ಆಚಾರ್ಯ, ಮಕ್ಕಳಾದ ಸಂದೇಶ್ ಮತ್ತು ಸಂತೋಷ್, ಗ್ರಾಮದ ಗೌಡಿಕೆ ಶಿವಮಲ್ಲಪ್ಪ, ಮುಖಂಡರಾದ ಪ್ರಭುಸ್ವಾಮಿ, ಮಾಜಿ ಗೌಡಿಕೆ ಶಿವರಾಜಪ್ಪ, ಮಹದೇವಪ್ಪ, ಮಂಜುನಾಥ್, ಗುರುಮೂರ್ತಿ, ಯೋಗಿಶ, ಶಿವಕುಮಾರ್, ನಾಗರಾಜಪ್ಪ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.