ಹುಲ್ಲೇಮಾಳ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಎರಡು ರಾಗಿ ಮೆದೆ ಭಸ್ಮವಾಗಿರುವುದು.
ಸರಗೂರು: ಹುಲ್ಲೇಮಾಳ ಗ್ರಾಮದಲ್ಲಿ ಶನಿವಾರ ಬಣವೆಗೆೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 5 ಎಕರೆ ರಾಗಿ ಹುಲ್ಲು ಸುಟ್ಟು ಭಸ್ಮವಾಗಿದೆ.
ಗ್ರಾಮದ ಮಂಜುನಾಥ್, ಬಸವರಾಜು ಎಂಬುವರಿಗೆ ಸೇರಿದ ಎರಡು ರಾಗಿ ಬಣವೆ(ಮೆದೆ)ಗಳು ಶನಿವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿದೆ. ಮನೆಯ ಹಿತ್ತಲಿನಲ್ಲಿ 15 ದಿನಗಳ ಹಿಂದೆ ಕಟಾವು ಮಾಡಿ ರಾಗಿ ಬಣವೆ ಹಾಕಲಾಗಿತ್ತು. ಇಂದು ಮಧ್ಯಾಹ್ನ ಮೆದೆಗೆ ಬೆಂಕಿ ಬಿದ್ದು, ಉರಿಯಲಾರಂಭಿಸಿತು. ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ಜ್ವಾಲೆಗೆ ಮೆದೆ ಸಂಪೂರ್ಣ ಭಸ್ಮವಾಗಿದೆ.
ರೈತ ಮಂಜುನಾಥ್, ಮಾತನಾಡಿ ಕೆಲ ದಿನಗಳ ಹಿಂದಷ್ಟೇ ರಾಗಿ ಕಟಾವು ಮಾಡಿ ಬಣವೆ ಹಾಕಲಾಯಿತು. ಎರಡು ಮೂರು ದಿನಗಳಲ್ಲಿ ರಾಗಿ ಒಕ್ಕಣೆ ಮಾಡಬೇಕಿತ್ತು. ಇಂದು ಬೆಂಕಿ ಬಿದ್ದು ರಾಗಿ ಬಣವೆಗಳು ಸಂಪೂರ್ಣ ಭಸ್ಮವಾಗಿದೆ. ಫಸಲು ನಷ್ಟದೊಂದಿದೆ ದನಕರುಗಳ ಮೇವು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ನಾಗಪ್ಪ ಭೇಟಿ ನೀಡಿ, ಪರಿಶೀಲಿಸಿದರು.