ಎಚ್.ಡಿ.ಕೋಟೆ ಪಟ್ಟಣದ ಕಾಳಿದಾಸ ರಸ್ತೆಯಲ್ಲಿರುವ ವಿನಾಯಕ ಬುಕ್ ಸ್ಟೇಷನರಿ ಮತ್ತು ಜೆರಾಕ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘದ ಸಂಭವಿಸಿ ಅಪಾರ ನಷ್ಟವಾಗಿದೆ.
ಎಚ್.ಡಿ.ಕೋಟೆ: ಪಟ್ಟಣದ ಕಾಳಿದಾಸ ರಸ್ತೆಯಲ್ಲಿ ಇರುವ ವಿನಾಯಕ ಬುಕ್ ಸ್ಟಾಲ್‌ನಲ್ಲಿ ಸೋಮವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ, ಜೆರಾಕ್ಸ್ ಮಿಷನ್, ಕಂಪ್ಯೂಟರ್ ಸೇರಿ ಅಂಗಡಿಯಲ್ಲಿದ್ದ ಪುಸ್ತಕ, ಪಿಠೋಪಕರಣ ಬೆಂಕಿಯಿಂದ ಸುಟ್ಟು ಭಸ್ಮವಾಗಿವೆ.
ವಿನಾಯಕ ಪುಸ್ತಕ ಮಳಿಗೆಯಿಂದ ರಾತ್ರಿ 10.30ರ ಸಮಯದಲ್ಲಿ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಕೆನರಾ ಬ್ಯಾಂಕ್ ಎಟಿಎಂ ಸಿಬ್ಬಂದಿ ಪ್ರಕಾಶ್, ತಕ್ಷಣ ಅಗ್ನಿ ಶಾಮಕ ದಳದ ಹೆಲ್ಪ್ ಲೈನ್‌ಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಅಂಗಡಿ ಬೀಗ ಹೊಡೆದು ಬೆಂಕಿ ನಂದಿಸಿದರು. ಅವಘಡದಿಂದ ಪುಸ್ತಕ ಮಳಿಗೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.